ಡೋಕ್ಲಾಂ ಆಯ್ತು, ಈಗ ಬ್ರಹ್ಮಪುತ್ರ ನದಿ ಮೇಲೆ ಚೀನಾ ಕಣ್ಣು……!! : ಗುಪ್ತವಾಗಿ ಸುರಂಗ ತೋಡಲು ಪ್ಲಾನ್‌

ಬೀಜಿಂಗ್‌ : ಡೋಕ್ಲಾಂ ವಿಚಾರದಲ್ಲಿ ಕ್ಯಾತೆ ತೆಗೆದು ಬಳಿಕ ಭಾರತದ ಜೊತೆ ಸಂದಾನ ಮಾಡಿಕೊಂಡಿರುವ ಚೀನಾ ಮತ್ತೊಂದು ಕ್ಯಾತೆ ತೆಗೆದಿದೆ. ಈ ಬಾರಿ  ಟಿಬೆಟ್‌ನಿಂದ ಹರಿಯುವ ಬ್ರಹ್ಮಪುತ್ರ ನದಿಯ ಮೇಲೆ ಕಣ್ಣು ಹಾಕಿರುವ ಚೀನಾ ಇಡೀ ನದಿಯನ್ನೇ ತನ್ನತ್ತ ತಿರುಗಿಸಿಕೊಳ್ಳಲು ಸಂಚು ಹೂಡಿದ್ದು, 1000 ಕಿ.ಮೀ ಸುರಂಗ ಕೊರೆಯಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಚೀನಾದ ಕ್ಸಿನ್ ಜಿಯಾಂಗ್‌ ಪ್ರಾಂತ್ಯಕ್ಕೆ ನೀರುಣಿಸುವ ಸಲುವಾಗಿ ಚೀನಾ ಈ ಬೃಹತ್‌ ಸಂಚನ್ನು ಸದ್ದಿಲ್ಲದೆ ತಯಾರು ಮಾಡುತ್ತಿದೆ. ಈಗಾಗಲೆ ಭಾರತ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಕ್ಸಿನ್‌ ಜಿಂಯಾಂಗ್‌ಗೆ ನೀರುಣಿಸುವ ಸಲುವಾಗಿ ಇಡೀ ಬ್ರಹ್ಮಪುತ್ರ ನದಿಯನ್ನೇ ತನ್ನೆಡೆಗೆ ತಿರುಗಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಇದರಿಂದಾಗಿ ಮತ್ತೆ ಭಾರತ ಹಾಗೂ ಚೀನಾ ಮಧ್ಯೆ ರಾಜತಾಂತ್ರಿಕ ಸಮರ ಏರ್ಪಡುವ ಸಾಧ್ಯತೆ ಇದೆ ಎಂದು ಚಿಂತಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ಬಗ್ಗೆ ಚೀನಾದ ಇಂಜಿನಿಯರ್ ಗಳು ಯುನಾನ್‌ ಪ್ರಾಂತ್ಯದ 600 ಎಕರೆ ಜಾಗದಲ್ಲಿ ಯೋಜನೆಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ರಹ್ಮಪುತ್ರ ನದಿಗೆ ದಕ್ಷಿಣ ಟಿಬೆಟ್‌ನಲ್ಲಿಯೇ ತಿರುವು ನೀಡಿ ಕ್ಸಿನ್ ಜಿಯಾಂಗ್ ಪ್ರದೇಶಕ್ಕೆ ಸುರಂಗ ಮಾರ್ಗದ ಮೂಲಕ ನೀರು ಹರಿಸುವ ಚಿಂತನೆ ಇದಾಗಿದೆ.

ಒಂದು ವೇಳೆ ಚೀನಾದ ಯೋಜನೆ ಯಶಸ್ವಿಯಾದರೆ ಭಾರತ ಹಾಗೂ ಬಾಂಗ್ಲಾದೇಶಕ್ಕೆ ಬಾರೀ ಹೊಡೆತ ಬೀಳಲಿದೆ. ಭಾರತದ ಅರುಣಾಚಲ ಪ್ರದೇಶ ಸೇರಿದಂತೆ ಅನೇಕ ರಾಜ್ಯದ ರೈತರು ಬ್ರಹ್ಮಪುತ್ರ ನದಿಯ ನೀರನ್ನೇ ಆಶ್ರಯಿಸಿದ್ದಾರೆ. ಆದರೆ ಚೀನಾ ಟಿಬೆಟ್‌ನಲ್ಲಿಯೇ ನೀರನ್ನು ತನ್ನತ್ತ ತಿರುಗಿಸಿಕೊಂಡರೆ ರೈತರು ಬರದಿಂದ ಸಾಯುವ ಪರಿಸ್ಥಿತಿ ಬಂದೊದಗುತ್ತದೆ. ಅಲ್ಲದೆ ಒಂದು ವೇಳೆ ಸಾಂಗ್ಲಿ ಪ್ರದೇಶದಲ್ಲಿ ಚೀನಾ ನಿರ್ಮಿಸಿರುವ ಅಣೆಕಟ್ಟು ಒಡೆದರೆ ಅರುಣಾಚಲ ಪ್ರದೇಶ ಹಾಗೂ ಸಿಕ್ಕಿ ರಾಜ್ಯಗಳು ಭಾರೀ ಅನಾಹುತ ಎದುರಿಸಬೇಕಾಗುತ್ತದೆ. ಅಲ್ಲದೆ ಇದರಿಂದ ಹಿಮಾಲಯದ ಮೇಲೂ ಸಾಕಷ್ಟು ಪರಿಣಾಮ ಬೀಳಲಿದೆ.

 

Leave a Reply

Your email address will not be published.