ಬೆಳ್ತಂಗಡಿ : ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಮಗು ಸಾವು

ಮಂಗಳೂರು : ಚಕ್ಕುಲಿ ತಿನ್ನುವಾಗ ಗಂಟಲಿಗೆ ಚಕ್ಕುಲಿ ಸಿಲುಕಿ 1 ವರ್ಷದ ಮಗು ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ. ಮೃತ ಮಗು ಆರುಷ್ ಎಂದು ತಿಳಿದುಬಂದಿದೆ.

ಮಗು ಆರುಷ್‌ಗೆ ಪೋಷಕರು ಚಕ್ಕುಲಿ ನೀಡಿದ್ದಾರೆ. ಅದು ಗಟ್ಟಿ ಇರುತ್ತದೆ ಎಂದು ತಿಳಿಯದ ಮಗು ಅದನ್ನು ನುಂಗಿದೆ. ಪರಿಣಾಮ ಚಕ್ಕುಲಿ ತುಂಡು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಮಗುವಿಗೆ ಉಸಿರಾಡಲು ಕಷ್ಟವಾಗಿದೆ. ಕೂಡಲೆ ಮಗುವನ್ನು ಗಮನಿಸಿದ ಪೋಷಕರು ಬೆಳ್ತಂಗಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೂ ಮಗುವನ್ನು ಉಳಿಸಿಕೊಳ್ಳಲು ಸಾಧಯವಾಗಿಲ್ಲ. ಮಗುವಿನ ಸಾವು ಪೋಷಕರಿಗೆ ಆಘಾತ ತಂದಿದ್ದು, ಆಕ್ರಂದನ ಮುಗಿಲುಮುಟ್ಟಿದೆ.

 

Leave a Reply

Your email address will not be published.

Social Media Auto Publish Powered By : XYZScripts.com