ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ವಿನಿತಾ : 3 ತಿಂಗಳಿನಿಂದ ಹೋರಾಟ ನಡೆಸುತ್ತಿರುವ ಪೋಷಕರು

ಉಡುಪಿ : ಮಂಡಿ ಆಪರೇಶನ್‌ಗೆ ಎಂದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಉಡುಪಿಯ ಬಾಲಕಿ ಶವವಾಗಿ ಹೊರಬಂದಿದ್ದಾಳೆ. ವೈದ್ಯರ ನಿರ್ಲಕ್ಷ್ಯವೇ ಬಾಲಕಿಯ ಸಾವಿಗೆ ಕಾರಣ ಎನ್ನಲಾಗುತ್ತಿದ್ದು, ಮೂರೂವರೆ ತಿಂಗಳ ಬಳಿಕ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಪೋಷಕರು ಹೋರಾಟ ಆರಂಭಿಸಿದ್ದಾರೆ.

ಉಡುಪಿ ಮೂಲದ ವಿನಿತಾ ಭಟ್‌, ಕ್ರೀಡೆ, ಓದು ಎಲ್ಲದರಲ್ಲೂ ಮೊದಲಿದ್ದಳು. ಬೆಂಗಳೂರಿನಲ್ಲಿ ಈಕೆ ತನ್ನ ಪೋಷಕರಾದ ವಾಸುದೇವ ಭಟ್‌ ಹಾಗೂ ಮಾಲಿನಿ ಅವರ ಜೊತೆ ವಾಸವಿದ್ದಳು. ಎಂ.ಕಾಂ ಮಾಡಿಕೊಂಡಿದ್ದ ವಿನಿತಾ ಹೆಚ್ಚಿನ ಓದು ಓದಿ ಬಡವರಿಗೆ ಸಹಾಯ ಮಾಡಬೇಕೆನ್ನುವ ಇರಾದೆ ಹೊಂದಿದ್ದಳು.

ಅಲ್ಲದೆ ಈಕೆ ಕ್ರೀಡಾಪಟುವಾಗಿದ್ದ ಕಾರಣ ಆಟವಾಡುವ ವೇಳೆ ಮಂಡಿಯಲ್ಲಿ ನೋವು ಕಾಣಿಸಿಕೊಂಡಿತ್ತು. ಬೆಂಗಳೂರಿನಲ್ಲಿರುವ ವೈದ್ಯರು ಯಾವುದೇ ತೊಂದರೆ ಇಲ್ಲ. ಅಗತ್ಯ ಬಿದ್ದರೆ ಮುಂದೆ ಸಣ್ಣದಾಗಿ ಆಪರೇಶನ್‌ ಮಾಡೋಣ ಎಂದಿದ್ದರು. ಆದರೆ ಒಮ್ಮೆ ಉಡುಪಿಗೆ ಬಂದಾಗ ಇದ್ದಕ್ಕಿದ್ದಂತೆ ಮತ್ತೆ ಮಂಡಿ ನೋವು ಕಾಣಿಸಿಕೊಂಡಿತ್ತು. ಆದ ಅಲ್ಲಿನ ಪ್ರಸಿದ್ಧ ವೈದ್ಯರಾದ ಭಾಸ್ಕರಾನಂದ ಅವರಲ್ಲಿ ತೋರಿಸಿದ್ದರು. ಅವರುರ ಕೂಡಲೇ ಆಪರೇಶನ್‌ ಮಾಡಬೇಕು ಎಂದು ಆಸ್ಪತ್ರೆಗೆ ತುರ್ತಾಗಿ ದಾಖಲಿಸುವಂತೆ ಸೂಚಿಸಿದ್ದರು.

ಪೋಷಕರು ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಸ್ತ್ರಚಿಕತ್ಸೆ ಯಶಸ್ವಿಯಾಗಿ ನಡೆದಿದೆ. ಆದರೆ ಆಪರೇಶನ್‌ ಆದ ಕೆಲವೇ ಗಂಟೆಗಳ ಬಳಿಕ ಆಕೆ ಸಾವಿಗೀಡಾಗಿದ್ದಾಳೆ. ವೈದ್ಯರು ಶಸ್ತ್ರ ಚಿಕಿತ್ಸೆ ವೇಳೆ ಓವರ್‌ ಡೋಸ್‌ ಅನಸ್ತೇಶಿಯಾ ನೀಡಿರುವುದು ಆಕೆಯ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಅನಸ್ತೇಶಿಯಾ ಕೊಟ್ಟಾಗ ದಾದಿಯರು ಇಷ್ಟೊಂದು ಹೆಚ್ಚಿನ ಡೋಸೇಜ್ ಕೊಟ್ಟಿದ್ದು ಯಾಕೆ ಎಂದು ಮಾತನಾಡಿಕೊಳ್ಳುತ್ತಿದ್ದುದನ್ನು ವಿನಿತಾ ಪೋಷಕರು ಕೇಳಿಸಿಕೊಂಡಿದ್ದರು.

ಆಪರೇಶನ್‌ ಮುಗಿದು ವಿನಿತಾ ವಾರ್ಡ್‌ಗೆ ಶಿಫ್ಟ್‌ ಆದಾಗ ಆಕೆ ಮಾತನಾಡುತ್ತಿದ್ದಳು. ಬಳಿಕ ಇದ್ದಕ್ಕಿದ್ದಂತೆ ಆಕೆ ಮೃತಪಟ್ಟಿದ್ದಾಳೆ. ಶಸ್ತ್ರಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿಲ್ಲ. ಆದರೂ ಆಕೆ ಹೇಗೆ ಮೃತಪಟ್ಟಳು ಎಂಬುದು ತಿಳಿದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.

ಆದರೆ ಪೋಷಕರು ವೈದ್ಯರ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದ್ದು, ಅದು ಬಂದ ಬಳಿಕವಷ್ಟೇ ಆಕೆಯ ಸಾವಿಗೆ ನಿಜವಾದ ಕಾರಣ ತಿಳಿದುಬರಲಿದೆ.

Leave a Reply

Your email address will not be published.

Social Media Auto Publish Powered By : XYZScripts.com