ಉಪ್ಪಿ ಸಾರಥ್ಯದಲ್ಲಿ “ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ” ಉದಯ : ಪತ್ನಿ ಪ್ರಿಯಾಂಕ ಖಜಾಂಚಿ

ಬೆಂಗಳೂರು : ರಿಯಲ್‌ ಸ್ಟಾರ್‌ ಉಪೇಂದ್ರ ಅನೇಕ ದಿನಗಳ ಹಿಂದೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ತಮ್ಮದೇ ಆದ ಪಕ್ಷ ಕಟ್ಟುವುದಾಗಿ ಹೇಳಿದ್ದ ಉಪೇಂದ್ರ ಮಂಗಳವಾರ ತಮ್ಮ ಪಕ್ಷದ ಹೆಸರನ್ನು ಘೋಷಿಸಿದ್ದಾರೆ.

ಉಪೇಂದ್ರ ತಮ್ಮ ಹೊಸ ಪಕ್ಷಕ್ಕೆ “ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷ” ಎಂಬ ಹೆಸರನ್ನು ಇಟ್ಟಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ, ಸುದ್ದಿ ಗೋಷ್ಠಿಯನ್ನೂ ವಿಭಿನ್ನವಾಗಿಯೇ ನಡೆಸಿದ್ದಾರೆ. ವೇದಿಕೆಯ ಮೇಲೆ ಪತ್ರಕರ್ತರನ್ನು ಕೂರಿಸಿ ತಾವು ಕುಟುಂಬ ಸಮೇತರಾಗಿ ಕೆಳಗಿನ ಸಾಲಿನಲ್ಲಿ ಕುಳಿತು ಸುದ್ದಿಗೋಷ್ಠಿ ನಡೆಸಿದ್ದಾರೆ.

ದೇಶದ ರಾಜಕೀಯ ಎಂಬ ಕಾನ್ಸೆಪ್ಟ್‌ ಬದಲಾಗಬೇಕು. ದೇಶದ ಶಿಕ್ಷಣ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬದಲಾವಣೆಯ ಅಗತ್ಯವಿದೆ. ನಾನು ಪ್ರಜಾಕೀಯ ಆರಂಭಿಸುತ್ತೇನೆ ಎಂದು ತಿಳಿದ ಮೇಲೆ ಸಾಕಷ್ಟು ಮಂದಿ ನನ್ನನ್ನು ಬೆಂಬಲಿಸಿದ್ದಾರೆ. ಇದೇ ರೀತಿ ನಿಮ್ಮ ಬೆಂಬಲ ಇರಲಿ ಎಂದಿದ್ದಾರೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಾಗಿಯೂ ಹೇಳಿದ್ದಾರೆ.

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ಉಪೇಂದ್ರ ಗೌರವಾಧ್ಯಕ್ಷರಾಗಿರಲಿದ್ದಾರೆ. ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಖಜಾಂಚಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com