ಇಂದು ಬಡವರು ಬ್ಯಾಂಕ್‌ ನೋಡಿದರೆ ಹೆದರಿ ಓಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ : ಸಿಎಂ

ಬೆಂಗಳೂರು : ದೇಶದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರು ಬಡವರನ್ನೂ ಬ್ಯಾಂಕಿಗೆ ಬರುವಂತೆ ಮಾಡಿದ್ದರು. ಆದರೆ ಇಂದು ಬ್ಯಾಂಕ್‌ ಎಂದರೆ ಬಡಜನರು ಹೆದರುವ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸಿಎಂ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದು, ಎನ್‌ಡಿಎ ಸರ್ಕಾರದ ವಿರುದ್ಧ ನೋಟು ಅಮಾನ್ಯೀಕರಣ ವಿಚಾರವಾಗಿ ಟೀಕಿಸಿದ್ದಾರೆ. ಇಂದಿರಾಗಾಂಧಿ ಬಡವರು ಬ್ಯಾಂಕಿಗೆ ಬರುವಂತೆ ಮಾಡಿದ್ದರು. ಆದರೆ ಇಂದು ಬಡವರು ಬ್ಯಾಂಕ್‌ ನೋಡಿದರೆ ಓಡುವಂತಹ ಪರಿಸ್ಥಿತಿ ಎದುರಾಗಿದೆ. ಇಂದು ದೇಶದ ಜನತೆಗೆ ಬೇಕಾಗಿರುವುದು ಬಡತನ, ಕಣ್ಣೀರು ಒರೆಸುವ ಇಂದಿರಾಗಾಂಧಿಯವರಂತಹ ಸ್ಪಂದಿಸುವ ಹೃದಯ. ಗರೀಬಿ ಹಠಾವೋ, ದೇಶ್‌ ಬಚಾವೋ ಎಂಬುದು ಕೇವಲ ಘೋಷಣೆಯಾಗಿರಲಿಲ್ಲ, ಬಡವರ ಜೀವನ ಮಟ್ಟ ಸುಧಾರಣೆಯ ಆದ್ಯತೆಯಾಗಿತ್ತು ಎಂದಿದ್ದಾರೆ.

ನಮ್ಮ ಸರ್ಕಾರದ ಅನ್ನಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್‌ನಂತಹ ಯೋಜನೆಗಳು ಇಂದಿರಾಗಾಂಧಿ ಅವರಿಂದ ಸ್ಪೂರ್ತಿ ಪಡೆದಂತಹವು ಎಂದಿದ್ದಾರೆ. ಬ

Leave a Reply

Your email address will not be published.

Social Media Auto Publish Powered By : XYZScripts.com