ರಾಜ್ಯದ ಡಿಜಿ ಐಜಿಪಿ ಹುದ್ದೆಗೇರಿದ ಮೊದಲ ಮಹಿಳೆ : ಪೊಲೀಸ್‌ ಇಲಾಖೆಯ ನೂತನ ಸಾರಥಿಯಾಗಿ ನೀಲಮಣಿ ರಾಜು ಆಯ್ಕೆ

ಬೆಂಗಳೂರು : ಹಿರಿಯ ಐಪಿಎಸ್‌ ಅಧಿಕಾರಿ ನೀಲಮಣಿ ರಾಜು ಅವರನ್ನು ರಾಜ್ಯದ ಪೊಲೀಸ್‌ ಮಹಾನಿರ್ದೇಶಕರ ಹುದ್ದೆಗೆ ನೇಮಕ ಮಾಡಲಾಗಿದ್ದು, ಈ ಮೂಲಕ ಡಿಜಿ ಐಜಿಪಿ ಹುದ್ದೆಗೇರಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪೊಲೀಸ್ ಮಹಾ ನಿರ್ದೇಶಕ ಆರ್‌. ಕೆ ದತ್ತಾ ಅವರ ಅಧಿಕಾರವಧಿ ಅಕ್ಟೋಬರ್ 31ಕ್ಕೆ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಹುದ್ದೆಗೆ ಹಿರಿತನದ ಆಧಾರದಲ್ಲಿ ನೀಲಮಣಿರಾಜು ಅವರನ್ನು ಸರ್ಕಾರ ಆಯ್ಕೆ ಮಾಡಿದೆ.

ಉತ್ತರಾಖಂಡ ಮೂಲದ ನೀಲಮಣಿ ರಾಜು 1983ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದರು. 23 ವರ್ಷಗಳ ಕಾಲ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಎಂಎ, ಎಂಬಿಎ, ಎಂಫಿಲ್‌ ಪದವೀಧರೆಯಾಗಿರುವ ಇವರು 2020ರವರೆಗೆ ಸೇವೆ ಸಲ್ಲಿಸಲು ಅವಕಾಶವಿದೆ.

ಮಂಗಳವಾರ ಸಂಜೆ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರೂಪಕ್‌ ಕುಮಾರ್ ದತ್ತಾ ಅವರು ನೀಲಮಣಿ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com