ರಾಜಕಾರಣಿಗಳು ರಕ್ತದ ರುಚಿ ಕಂಡ ಹುಲಿಗಳು : ನ್ಯಾ. ಸಂತೋಷ್ ಹೆಗ್ಡೆ

ಬಾಗಲಕೋಟೆ : ಗಣಿ ವಿಚಾರ ಸಂಬಂಧ ಶೀಘ್ರದಲ್ಲೇ ವಿಚಾರವೊಂದನ್ನು ಬಹಿರಂಗಪಡಿಸುವುದಾಗಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗಡೆ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ ಶೀಘ್ರದಲ್ಲೇ ಈ ಬಗ್ಗೆ ಮಾಧ್ಯಮಗಳ ಎದುರು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ಎಸಬಿಯನ್ನು ಮುಚ್ಚಿ ಲೋಕಾಯುಕ್ತವನ್ನು ಬಲಪಡಿಸಿ ಲೋಕಾಯುಕ್ತಕ್ಕೆ ಅಧಿಕಾರವನ್ನು ವಾಪಸ್‌ ನೀಡಬೇಕು. ಲೋಕಾಯುಕ್ತ ಸಂಸ್ಥೆ ಇರುವುದು ಯಾವುದೇ ರಾಜಕೀಯ ಪಕ್ಷಗಳಿಗೂ ಬೇಕಿಲ್ಲ. ರಾಜಕಾರಣಿಗಳೆಲ್ಲಾ ರಕ್ತದ ರುಚಿಕಂಡ ಹುಲಿಗಳು ಎಂದು ರಾಜಕೀಯ ಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ರಾಜಕಾರಣಿಗಳು ಜನರ ಸೇವಕರಾಗಿರಬೇಕು. ಆದರೆ ಅದನ್ನು ಅವರು ಮರೆತಂತಿದೆ. ಅವರು ಜನತಾ ಮಾಲೀಕರಂತಾಡತೊಡಗಿದ್ದಾರೆ. ಶಾಸಕಾಂಗ ಎಲ್ಲಾ ಕ್ಷೇತ್ರಗಳಲ್ಲೂ ಹಸ್ತಕ್ಷೇಪ ಮಾಡುತ್ತಿದೆ. ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com