ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್ಷಿಪ್ : ಚಿನ್ನ ಗೆದ್ದ ಹೀನಾ ಸಿಧು, ದೀಪಕ್ ಕುಮಾರ್ ಗೆ ಕಂಚು

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಹೀನಾ ಸಿಧು ಚಿನ್ನದ ಪದಕ ಗೆದ್ದಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಚಾಂಪಿಯನ್ಷಿಪ್ ನ ಮಹಿಳೆಯರ 10 ಮೀಟರ್ ಏರ್ ಪಿಸ್ಟಲ್ ವಿಭಾಗದಲ್ಲಿ ಭಾರತದ ಹೀನಾ ಸಿಧು ಮಂಗಳವಾರ ಸ್ವರ್ಣ ಪದಕ ಗೆದ್ದಿದ್ದಾರೆ.

240.8 ಪಾಯಿಂಟ್ಸ್ ಗಳಿಸಿದ ಹೀನಾ ಸಿಧು ಬಂಗಾರವನ್ನು ಗೆದ್ದರೆ, 238.2 ಪಾಯಿಂಟ್ಸ್ ಗಳಿಸಿದ ಆಸ್ಟ್ರೇಲಿಯಾದ ಎಲೆನಾ ಗ್ಯಾಲಿಯಾಬೋವಿಚ್ ರಜತ ಪದಕವನ್ನು ಜಯಿಸಿದರು. 213.7 ಪಾಯಿಂಟ್ಸ್ ಗಳಿಸಿದ ಆಸ್ಟ್ರೇಲಿಯಾದ ಕ್ರಿಸ್ಟಿ ಗಿಲ್ಮನ್ ಕಂಚಿನ ಪದಕ ಪಡೆದರು. ಪುರುಷರ 10 ಮೀಟರ್ ಏರ್ ರೈಫಲ್ಸ್ ವಿಭಾಗದಲ್ಲಿ ಭಾರತದ ದೀಪಕ್ ಕುಮಾರ್ ಕಂಚಿನ ಪದಕ ಜಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com