ಮುಂದಿನ ಚುನಾವಣೆಯಲ್ಲಿ CPI ನಿಂದ ಕನ್ಹಯ್ಯಾ ಕುಮಾರ್ ಸ್ಪರ್ಧೆ : ಕೆ ಆರ್ ನಾರಾಯಣ್

ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ಹೇಳಿದೆ. ಇದಕ್ಕೆ ಸಂಬಂಧ ಪಟ್ಟಂತೆ ಕನ್ಹಯ್ಯಾ ಕುಮಾರ್ ಅವರ ಸಹಮತಿಯನ್ನೂ ಸಹ ಪಡೆಯಲಾಗಿದೆ ಎಂದು ಪಕ್ಷ ಹೇಳಿಕೊಂಡಿದೆ. ಕನ್ಹಯ್ಯಾ ಕುಮಾರ್ ತಮ್ಮ ತವರು ಜಿಲ್ಲೆಯಾದ ಬೇಗುಲ್ ಸರಾಯ್ ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸುವ ಸಾಧ್ಯತೆಯಿದೆ ಎಂದು ಸಿಪಿಐ ನ ರಾಷ್ಟ್ರೀಯ ಸಮಿತಿ ಮುಖ್ಯಸ್ಥ ಕೆ ಆರ್ ನಾರಾಯಣ್ ಹೇಳಿದ್ದಾರೆ.

ಪಾಟ್ನಾದಲ್ಲಿ ರಾಜ್ಯ ಪರಿಷತ್ತಿನ ಎರಡು ದಿನದ ಕಾರ್ಯಕಾರಿಣಿ ಸಭೆಯ ನಂತರ ಮಾತನಾಡಿದ ಕೆ ಆರ್ ನಾರಾಯಣ್, ‘ ಕನ್ಹಯ್ಯಾ ಅವರು ಕೇರಳದಲ್ಲಿ ಸ್ಪರ್ಧಿಸಲಿ ಎಂಬ ಪ್ರಸ್ತಾವವೂ ಇದೆ. ಆದರೆ ಬಿಹಾರದಲ್ಲಿಯೇ ಚುನಾವಣೆಗೆ ನಿಲ್ಲಲಿ ಎಂಬುದು ನಮ್ಮೆಲ್ಲರ ಬೇಡಿಕೆಯಾಗಿದೆ ‘ ಎಂದಿದ್ದಾರೆ.

‘ ಕಳೆದ ಎರಡು ಬಾರಿಯೂ ಬೇಗುಲ್ ಸರಾಯ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಲಾಲೂ ಪ್ರಸಾದ್ ಯಾದವ್ ನಮಗೆ ಬೆಂಬಲ ನೀಡುವ ಸಾಧ್ಯತೆಯಿದ್ದು, ಬಿಜೆಪಿ ಕಳೆದೆರಡು ಬಾರಿ ಕಡಿಮೆ ಅಂತರದಿಂದ ಗೆಲುವು ಗಳಿಸಿದೆ. ಕನ್ಹಯ್ಯಾ ಕುಮಾರ್ ಚುನಾವಣೆಗೆ ಸ್ಪರ್ಧಿಸಿದರೆ ಗೆಲುವು ಸುಲಭವಾಗಿರುವುದಿಲ್ಲ. ‘ ಎಂದು ನಾರಾಯಣ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com