ಬಾಲಿವುಡ್‌ನ ಬ್ಯಾಡ್‌ ಬಾಯ್‌ “ಬಾಡಿಗಾರ್ಡ್‌”ನ ತಿಂಗಳ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ……!!!!

ಬಾಲಿವುಡ್‌ ಸೆಲೆಬ್ರಿಟಿಗಳು ಎಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದಾರೋ,ಅವರ ಕಾರು ಚಾಲಕರು, ಬಾಡಿಗಾರ್ಡ್‌ಗಳೂ ಅಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದಾರೆ. ಬಾಲಿವುಡ್‌ ಸೆಲೆಬ್ರೆಟಿಗಳು, ರಾಜಕಾರಣಿಗಳ ಪಿಎ, ಬಾಡಿಗಾರ್ಡ್‌, ಕಾರು ಚಾಲಕರ ಸಂಬಳ ಎಲ್ಲರನ್ನು ಚಕಿತಗೊಳಿಸದೇ ಇರದು.

ನಟ ಸಲ್ಮಾನ್‌ ಖಾನ್‌ ಅವರ ಬಾಡಿಗಾರ್ಡ್‌ ಶೇರಾ, ಯಾವ ಸೆಲೆಬ್ರಿಟಿಗಳಿಗಿಂತಲೂ ಕಮ್ಮಿಇಲ್ಲ ಎಂಬಂತೆ ತಿಂಗಳಿಗೆ 15 ಲಕ್ಷ ಸಂಬಳ ಪಡೆಯುತ್ತಾರಂತೆ. ಸಲ್ಮಾನ್‌ ಖಾನ್‌ ಜೊತೆ 20 ವರ್ಷಗಳಿಂದಲೂ ಬಾಡಿಗಾರ್ಡ್‌ ಆಗಿರುವ ಶೇರಾ ಆದಾಯ ವರ್ಷಕ್ಕೆ 2 ಕೋಟಿಯಂತೆ.

ಶೇರಾ ಭಾರತದಲ್ಲಿ ಮಾತ್ರವಲ್ಲ, ವಿದೇಶಿ ಸೆಲೆಬ್ರಿಟಿಗಳಿಗೂ ಬಾಡಿಗಾರ್ಡ್‌ ಆಗಿ ಕೆಲಸ ಮಾಡಿದ್ದರು. ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಾದ ಜಸ್ಟೀನ್‌ ಬೈಬರ್‌, ಮೈಕಲ್ ಜಾಕ್ಸನ್‌, ವಿಲ್‌ ಸ್ಮಿತ್‌, ಪ್ಯಾರಿಸ್ ಹಿಲ್ಟನ್‌, ಜಾಕಿ ಚಾನ್‌ ಸೇರಿದಂತೆ ಅನೇಕರ ರಕ್ಷಣೆಯ ಹೊಣೆ ಹೊತ್ತಿದ್ದರು.

ರಿಲಯನ್ಸ್‌ ಇಂಡಸ್ಟ್ರಿ ಲಿ.ನ ಮುಖ್ಯಸ್ಥ, ಎಂ.ಡಿ, ರಿಲಯನ್ಸ್‌ನ ಶೇರ್‌ ಹೋಲ್ಡರ್‌, ಭಾರತದ ಅತೀ ಶ್ರೀಮಂತ ವ್ಯಕ್ತಿ, 38 ಬಿಲಿಯನ್‌ ಡಾಲರ್‌ಗಳ ಒಡೆಯ ಮುಖೇಶ್‌ ಅಂಬಾನಿ ಈಗ ಸುದ್ದಿಯಾಗಿದ್ದಾರೆ. ಕಾರಣ ಅವರ ಡ್ರೈವರ್‌ ಸಂಬಳ.
ಹೌದು ಭಾರತದ ಅತೀ ಶ್ರೀಮಂತ ಉದ್ಯಮಿ ಮುಖೇಶ್‌ ಅಂಬಾನಿಯ ಕಾರು ಚಾಲಕನ ಸಂಬಳ ಕೇಳಿದರೆ ಒಮ್ಮೆ ಶಾಕ್‌ ಆಗೋದು ಖಂಡಿತ. ಮುಖೇಶ್‌ ಅಂಬಾನಿಯ ಕಾರು ಚಾಲಕನ ತಿಂಗಳ ಸಂಬಳ 2 ಲಕ್ಷವಂತೆ.

ಮುಖೇಶ್‌ ಅಂಬಾನಿ ತನ್ನ ಕಾರು ಚಾಲಕನನ್ನು ಆಯ್ಕೆ ಮಾಡುವ ವಿಧಾನ ಈಗ ಬಹಿರಂಗವಾಗಿದೆ. ಚಾಲಕನನ್ನು ಬಾಡಿಗೆಗೆ ಪಡೆದುಕೊಳ್ಳಲು ಖಾಸಗಿ ಕಂಪನಿಯೊಂದಕ್ಕೆ ಕಾಂಟ್ರ್ಯಾಕ್ಟ್‌ ನೀಡಲಾಗುತ್ತದೆ.  ಚಾಲಕನಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ. ಬಳಿಕ ಆತ ಸಾಕಷ್ಟು ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ. ಎಲ್ಲಾ ಪರೀಕ್ಷೆಯಲ್ಲೂ ಪಾಸಾದರೆ ಆತನನ್ನು ಮುಖೇಶ್‌ ಅಂಬಾನಿ ಡ್ರೈವರ್‌ ಕೆಲಸಕ್ಕೆ ತೆಗೆದುಕೊಳ್ಳಲಿದ್ದು, ತಿಂಗಳಿಗೆ 2 ಲಕ್ಷ ಸಂಬಳ ನೀಡಲಾಗುತ್ತದೆ. ಜೊತೆಗೆ ಅವರಿಗೆ ಉಳಿದುಕೊಳ್ಳಲು ಮನೆ ಹಾಗೂ ಊಟವನ್ನು ನೀಡಲಾಗುತ್ತದೆ ಎಂದು ಮೂಲಗಳು ವರದಿ ಮಾಡಿವೆ.

 

Leave a Reply

Your email address will not be published.

Social Media Auto Publish Powered By : XYZScripts.com