U -17 ಫಿಫಾ ವಿಶ್ವಕಪ್ ಫೈನಲ್ : ಸ್ಪೇನ್ ವಿರುದ್ಧ 5-2 ಜಯಿಸಿ ಚಾಂಪಿಯನ್ ಆದ ಇಂಗ್ಲೆಂಡ್

ಅಂಡರ್ – 17 ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಸ್ಪೇನ್ ವಿರುದ್ಧ 5-2 ಜಯಗಳಿಸಿರುವ ಇಂಗ್ಲೆಂಡ್ ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೋಲ್ಕತಾದ ವಿವೇಕಾನಂದ ಯುವಾ ಭಾರತಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅಮೋಘ ಜಯ ಗಳಿಸಿದೆ.

ಸ್ಪೇನ್ ಪರವಾಗಿ ಸರ್ಜಿಯೋ ಗೊಮೆಜ್ 10ನೇ ನಿಮಿಷ ಹಾಗೂ 31 ನೇ ನಿಮಿಷದಲ್ಲಿ 2 ಗೋಲ್ ಬಾರಿಸಿದರು. ಮೊದಲರ್ಧದಲ್ಲಿ ಸ್ಪೇನ್ 2-1 ಅಂತರದ ಮುನ್ನಡೆ ಸಾಧಿಸಿತ್ತು. ಇಂಗ್ಲೆಂಡ್ ಪರವಾಗಿ ರಿಯಾನ್ ಬ್ರೆವ್ಸ್ಟರ್ 44ನೇ ನಿಮಿಷ ,  ಮೋರ್ಗನ್ ಗಿಬ್ಸ್ ವೈಟ್ 58ನೇ ನಿಮಿಷ , ಫಿಲ್ ಫೋಡೆನ್ 69 & 88ನೇ ನಿಮಿಷ , ಮಾರ್ಕ್ ಗುಯೇಹಿ 84 ನೇ ನಿಮಿಷದಲ್ಲಿ ಗೋಲ್ ಬಾರಿಸಿದರು.

Image result for fifa u17 england

ದ್ವಿತೀಯಾರ್ಧದಲ್ಲಿ ಪ್ರಬಲ ಹೋರಾಟ ನಡೆಸಿ ಅದ್ಭುತ ಕಮ್ ಬ್ಯಾಕ್ ಮಾಡಿದ ಇಂಗ್ಲೆಂಡ್, ಸ್ಪೇನ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿದೆ. ಪ್ರಸಕ್ತ ವರ್ಷದಲ್ಲಿ ಇಂಗ್ಲೆಂಡ್ ಗೆಲ್ಲುತ್ತಿರುವ ಎರಡನೇ ವಿಶ್ವಕಪ್ ಇದಾಗಿದ್ದು, ಜೂನ್ ತಿಂಗಳಲ್ಲಿ ಅಂಡರ್ – 20 ಫಿಫಾ ವಿಶ್ವಕಪ್ ನಲ್ಲಿಯೂ ಇಂಗ್ಲೆಂಡ್ ಜಯಿಸಿತ್ತು.

ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಬ್ರೆಜಿಲ್, ಮಾಲಿ ತಂಡವನ್ನು ಸೋಲಿಸಿ 3ನೇ ಸ್ಥಾನ ಪಡೆದುಕೊಂಡಿದೆ. ಮೊದಲ ಬಾರಿಗೆ ಫಿಫಾ ಟೂರ್ನಿಯ ಆತಿಥ್ಯ ವಹಿಸಿಕೊಂಡಿದ್ದ ಭಾರತ ಅಮೇರಿಕ, ಕೋಲಂಬಿಯಾ, ಹಾಗೂ ಘಾನಾ ಎದುರು ಸೋತು ನಿರಾಸೆ ಅನುಭವಿಸಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com