ಚಾಮುಂಡೇಶ್ವರಿ ಗರ್ಭಗುಡಿಗೆ ಚಿನ್ನದ ಬಾಗಿಲು ಸಮರ್ಪಿಸಿ ಹರಕೆ ತೀರಿಸಿದ ಭಕ್ತ

ಮೈಸೂರು : ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ಚಿನ್ನದ ಬಾಗಿಲು ಬಂದಿದೆ. ಬೆಂಗಳೂರು ಮೂಲಕ ವಕೀಲ ಜಯಶ್ರೀ ಶ್ರೀಧರ್‌ ಎಂಬುವವರು ಚಾಮುಂಡೇಶ್ವರಿ ದೇವಿಯ ದೇವಾಲಯಕ್ಕೆ ಚಿನ್ನದ ಬಾಗಿಲನ್ನು ಅರ್ಪಿಸಿದ್ದಾರೆ.

ಕೋಟ್ಯಂತರ ರೂ ಹಣವನ್ನು ಖರ್ಚು ಮಾಡಿದ್ದಾರೆ. ಈ ಹಿಂದೆ ಜಯಶ್ರೀ ಅವರು ಗರ್ಭಗುಡಿಯ ಬಾಗಿಲಿಗೆ ಚಿನ್ನದ ಪಟ್ಟಿ ಹಾಗೂ ಬಾಗಿಲು ಅರ್ಪಿಸುವುದಾಗಿ ಹರಕೆ ಹೊತ್ತಿದ್ದರಂತೆ,ಅದರಂತೆ ದೇವಸ್ಥಾನದ ಆಡಳಿತ ಮಂಡಳಿ ಜೊತೆ ಚರ್ಚಿಸಿ ಹರಕೆ ತೀರಿಸಿದ್ದಾರೆ.

ಬಾಗಿಲಿನ ಮೇಲೆ ನವದುರ್ಗೆಯರ ಚಿತ್ರವಿದ್ದು, ಈ ಬಾಗಿಲು ಸುಮಾರು 4 ಕೆ.ಜಿ ತೂಕದ್ದಾಗಿದೆ.

ಇತ್ತೀಚೆಗಷ್ಟೇ ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಚಾಮುಂಡೇಶ್ವರಿಗೆ ಬೆಳ್ಳಿಯ ಆನೆಯನ್ನು ನೀಡಿ ಹರಕೆ ತೀರಿಸಿದ್ದರು.

 

 

 

Leave a Reply

Your email address will not be published.

Social Media Auto Publish Powered By : XYZScripts.com