ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಲು ಅದೇನು ಶಾಲೆನಾ : ವಿದ್ಯಾಬಾಲನ್‌

ಮುಂಬೈ : ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ವಿಚಾರ ಸಂಬಂಧ ಎಲ್ಲೆಡೆ ಚರ್ಚೆಯಾಗುತ್ತಿದೆ. ಸೆಲೆಬ್ರಿಟಿಗಳೂ ಈ ಚರ್ಚೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಾರಿ ಬಾಲಿವುಡ್ ನಟಿ ವಿದ್ಯಾಬಾಲನ್ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಕುರಿತು ಹೇಳಿಕೆ ನೀಡಿದ್ದು, ಒತ್ತಾಯ ಪೂರ್ವಕವಾಗಿ ರಾಷ್ಟ್ರಗೀತೆ ಹಾಡಿಸಿ ದೇಶಭಕ್ತಿ ತೋರಿಸಬೇಕೆಂಬುದು ಸರಿಯಲ್ಲ ಎಂದಿದ್ದಾರೆ.

ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡುವ ಅವಶ್ಯಕತೆ ಇಲ್ಲ ಎನಿಸುತ್ತದೆ. ರಾಷ್ಟ್ರಗೀತೆಯೊಂದಿಗೆ ದಿನವನ್ನು ಪ್ರಾರಂಭಿಸುವಂತೆ ಚಿತ್ರಮಂದಿರಗಳಲ್ಲೂ ಮಾಡುವುದಕ್ಕೆ ಅದು ಶಾಲೆಯಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಬಲವಂತದ ದೇಶಭಕ್ತಿ ಸೂಕ್ತವಲ್ಲ ಎನಿಸುವುದಾಗಿ ಹೇಳಿದ್ದಾರೆ.

ನನಗೆ ನನ್ನ ದೇಶದ ಬಗ್ಗೆ ಪ್ರೀತಿ ಇದೆ. ನನ್ನ ದೇಶವನ್ನು ಬಹಳ ಪ್ರೀತಿಸುತ್ತೇನೆ. ಅದಕ್ಕಾಗಿ ಏನು ಮಾಡಲೂ ಸಿದ್ದ. ಆದರೆ ರಾಷ್ಟ್ರಪ್ರೇಮದ ಪಾಠವನ್ನು ಬೇರೆಯವರಿಂದ ಕಲಿಯುವ ಅಗತ್ಯವಿಲ್ಲ. ನನಗೆ ಎಲ್ಲೇ ರಾಷ್ಟ್ರಗೀತೆ ಕೇಳಿಸಿದರೂ ಎದ್ದು ನಿಂತು ಗೌರವಿಸುತ್ತೇನೆ ಎಂದಿದ್ದಾರೆ.

 

Leave a Reply

Your email address will not be published.