ಡಿಜಿಟಲ್‌ ವ್ಯವಹಾರದ ಎಫೆಕ್ಟ್‌ : ಎಟಿಎಂ ಕೇಂದ್ರಗಳಿಗೆ ಬೀಳುತ್ತಿದೆ ಬೀಗ

ದೆಹಲಿ : ಪ್ರಧಾನಿ ಮೋದಿ ದೇಶದಲ್ಲಿ ನೋಟ್ ಬ್ಯಾನ್ ಮಾಡಿದ ನಂತರ ಭಾರತ ಡಿಜಿಟಲೀಕಣದತ್ತ ಸಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಮೊಟ್ಟ ಮೊದಲ ಬಾರಿಗೆ ಎಟಿಎಂ ಕೇಂದ್ರಗಳನ್ನು ಕಡಿಮೆ ಮಾಡಲಾಗಿದ್ದು, ವಿವಿಧ ಬ್ಯಾಂಕ್‌ಗಳು ಎಂಟಿಎಂ ಕೇಂದ್ರಗಳಿಗಾಗಿ ಆಗುವ ಖರ್ಚನ್ನು ಗಮನದಲ್ಲಿಟ್ಟುಕೊಂಡು ಎಟಿಎಂ ಬಾಗಿಲು ಬಂದ್ ಮಾಡುತ್ತಿವೆ.

ಎಸ್‌ಬಿಐ ಜೊತೆ ಕೆಲ ಬ್ಯಾಂಕ್‌ಗಳು ವಿಲೀನವಾದ ಬಳಿಕ ಅನೇಕ ಕಡೆ ಎಟಿಎಂ ಗಳನ್ನು ಮುಚ್ಚಲಾಗಿದೆ. ಕಳೆದ ಜೂನ್‌ನಿಂದ ಆಗಸ್ಟ್‌ ಮಧ್ಯದವರೆಗೆ 358 ಎಟಿಎಂ ಕೇಂದ್ರಗಳನ್ನು ಮುಚ್ಚಲಾಗಿದೆ.

ಏರ್‌ಪೋರ್ಟ್‌ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಎಟಿಎಂ ಕೇಂದ್ರಗಳು ಹೆಚ್ಚಿದ್ದರೆ ಅದರ ಬಾಡಿಗೆ, ವಿದ್ಯುತ್‌ ವೆಚ್ಚ, ರಕ್ಷಣಾ ಸಿಬ್ಬಂದಿ ಸೇರಿದಂತೆ ಮತ್ತಿತರ ವೆಚ್ಚಗಳು ದುಬಾರಿಯಾಗುತ್ತವೆ. ಒಂದು ಎಟಿಎಂ ಕೇಂದ್ರದ ಮಾಸಿಕ ಖರ್ಚು 30 ಸಾವಿರದಿಂದ 1 ಲಕ್ಷದವರೆಗೆ ಆಗಲಿದ್ದು, ಈ ಕಾರಣಕ್ಕಾಗಿ ಎಟಿಎಂ ಗಳನ್ನು ಮುಚ್ಚುತ್ತಿರುವುದಾಗಿ ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಿದ್ದಾರೆ.

 

 

Leave a Reply

Your email address will not be published.