ಕ್ರಿಕೆಟ್ : ರೋಹಿತ್, ಕೊಹ್ಲಿ ಶತಕದ ಮಿಂಚು : ಭಾರತಕ್ಕೆ 6 ರನ್ ರೋಚಕ ಜಯ

ಕಾನ್ಪುರದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 6 ರನ್ನುಗಳ ರೋಚಕ ಜಯ ಸಾಧಿಸಿ ಸರಣಿಯನ್ನು 3 ಪಂದ್ಯಗಳ 2-1 ರಿಂದ ತನ್ನದಾಗಿಸಿಕೊಂಡಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಶತಕಗಳ ನೆರವಿನಿಂದ 337 ರನ್ ಬೃಹತ್ ಮೊತ್ತ ಸೇರಿಸಿತು.

ಅಮೋಘ ಶತಕ ಬಾರಿಸಿದ ರೋಹಿತ್ ಶರ್ಮಾ 147 ರನ್ ಇನ್ನಿಂಗ್ಸ್ ನಲ್ಲಿ 18 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 32 ನೇ ಶತಕ ದಾಖಲಿಸಿದ ನಾಯಕ ವಿರಾಟ್ ಕೊಹ್ಲಿ 9000 ರನ್ ಗಡಿ ದಾಟಿದರು. ನ್ಯೂಜಿಲೆಂಡ್ ಪರ ಟಿಮ್ ಸೌದೀ, ಮಿಚೆಲ್ ಸ್ಯಾಂಟ್ನರ್, ಆ್ಯಡಮ್ ಮಿಲ್ನೆ ತಲಾ 2 ವಿಕೆಟ್ ಪಡೆದರು.

Related image

338 ರನ್ ಟಾರ್ಗೆಟ್ ಚೇಸ್ ಮಾಡಲಿಳಿದ ನ್ಯೂಜಿಲೆಂಡ್ 50 ಓವರುಗಳಲ್ಲಿ 331 ರನ್ ಗಳಿಸಿ 6 ರನ್ ಸೋಲನುಭವಿಸಿತು. ಆರಂಭಿಕ ಆಟಗಾರ ಕಾಲಿನ್ ಮನ್ರೋ 75, ನಾಯಕ ಕೇನ್ ವಿಲಿಯಮ್ಸನ್ 64, ಟಾಮ್ ಲಥಾಮ್ 65 ರನ್ ಗಳಿಸಿದರು. ಒಂದು ಹಂತದಲ್ಲಿ ಗೆಲುವಿಗೆ ಅತ್ಯಂತ ಸನಿಹದಲ್ಲಿದ್ದ ಕಿವೀಸ್ ಕೊನೆಯ 4 ಓವರ್ ಗಳಲ್ಲಿ ಪಂದ್ಯದ ಮೇಲಿನ ನಿಯಂತ್ರಣ ಕಳೆದುಕೊಂಡಿತು. ಭಾರತದ ಪರವಾಗಿ ಜಸ್ಪ್ರೀತ್ ಬುಮ್ರಾ 3 ಹಾಗೂ ಯಜುವೇಂದ್ರ ಸಿಂಗ್ ಚಹಲ್ 2 ವಿಕೆಟ್ ಪಡೆದರು.

ಭರ್ಜರಿ ಸೆಂಚುರಿ ಸಿಡಿಸಿದ ರೋಹಿತ್ ಶರ್ಮಾ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸರಣಿಯಲ್ಲಿ ಎರಡು ಶತಕ ಬಾರಿಸಿದ ವಿರಾಟ್ ಕೊಹ್ಲಿ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com