ಭಾರತ ಪಾರಂಪರಿಕ ಜ್ಞಾನ ಭಂಡಾರ, ಅದನ್ನು ಕಡೆಗಣಿಸಬೇಡಿ : ಇಸ್ರೋ ಅಧ್ಯಕ್ಷ

ಬೆಂಗಳೂರು :  ಭಾರತ ಪಾರಂಪರಿಕ ಜ್ಞಾನದ ಭಂಡಾರವಿದ್ದಂತೆ ಅದರ ಬಗ್ಗೆ ಅಸಡ್ಡೆ ತೋರಬೇಡಿ ಎಂದು ಇಸ್ರೋ ಅಧ್ಯಕ್ಷ ಡಾ. ಎ.ಎಸ್‌ ಕಿರಣ್ ಕುಮಾರ್ ಹೇಳಿದ್ದಾರೆ. ವೇದಾಂತ ಭಾರತೀ ಸಂಸ್ಥೆ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಸೌಂದರ್ಯ ಲಹರಿ ಪಾರಾಯಣೋತ್ಸವ ಮಹಾಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು,

ಭಾರತದ ಪಾರಂಪರಿಕ ಜ್ಞಾನ ಬಹಳ ದೊಡ್ಡದು. ಪಾಶ್ಚಿಮಾತ್ಯ ರಾಷ್ಟ್ರಗಳ ಜ್ಞಾನವೇ ಶ್ರೇಷ್ಠ, ವಿಜ್ಞಾನವೇ ಶ್ರೇಷ್ಠ ಎಂಬ ಭ್ರಮೆಯಿಂದ ದೇಶದ ಯುವ ಮನಸ್ಸುಗಳು ಹೊರಬರಬೇಕಿದೆ ಎಂದಿದ್ದಾರೆ.

ಹಿಂದಿನ ಪರಂಪರೆಯಿಂದ ಬಂದಿರುವ ವಿಷಯಗಳು ತಪ್ಪು ಅಥವಾ ಅವು ಸರಿಯಿಲ್ಲ ಎಂಬ ಮನೋಭಾವನೆ ಸರಿಯಲ್ಲ. ಅದನ್ನು ಬದಲಿಸಿಕೊಳ್ಳಬೇಕು, ಆದಿ ಶಂಕರರು, ಋಷಿ ಮುನಿಗಳಿಂದ ಸಾಕಷ್ಟು ಜ್ಞಾನ ನಮಗೆ ಸಿಕ್ಕಿದೆ. ಅದನ್ನು ಮೊದಲು ನಾವು ಅರ್ಥಮಾಡಿಕೊಳ್ಳಬೇಕು. ವಿದೇಶದಿಂದ ಬಂದ ಜ್ಞಾನವೇ ಸರಿ ಎಂಬುದು ತಪ್ಪು ಕಲ್ಪನೆ ಎಂದಿದ್ದಾರೆ.

ಸೌಂದರ್ಯಲಹರಿಯಲ್ಲಿನ ಅಗಾಧ ವಿಚಾರಗಳು ಅಷ್ಟು ಸುಲಭಕ್ಕೆ ಅರ್ಥವಾಗುವುದಿಲ್ಲ. ಇಂತಹ ವಿಚಾರಗಳನ್ನು ಮನನ ಮಾಡಿಕೊಂಡು ಅನುಭವ ಪಡೆಯಬೇಕು ಎಂದಿದ್ದಾರೆ.

 

Leave a Reply

Your email address will not be published.