ಕರೀಂ ಲಾಲ್‌ ತೆಲಗಿ ಮೃತದೇಹದ ಮುಂದೆಯೇ ಕುಟುಂಬಸ್ಥರ ಗಲಾಟೆ

ಬೆಳಗಾವಿ : ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದ ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಅಪರಾಧಿ ಕರೀಂ ಲಾಲ್ ತೆಲಗಿ ಮೃತದೇಹದ ಅಂತಿಮ ಸಂಸ್ಕಾರ ನಡೆಯುತ್ತಿದೆ. ಈ ಮಧ್ಯೆ ಶವದ ಮುಂದೆಯೇ ಕುಟುಂಬಸ್ಥರು ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.

ತೆಲಗಿ ಮೃತದೇಹವನ್ನು ನೋಡಲು ಆತನ ಸಹೋದರಿ ಅಜೀಂ ತೆಲಗಿ ಬಂದಿದ್ದಾರೆ. ಈ ವೇಳೆ ಅಜೀಂ ಹಾಗೂ ತೆಲಗಿ ಮಗಳು ಸನಾ ಮಧ್ಯೆ ವಾಗ್ವಾದ ನಡೆದಿದೆ. ತೆಲಗಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಆತನನ್ನು ನೋಡಲು ಕುಟುಂಬಸ್ಥರು ಯಾರೂ ಬಂದಿರಲಿಲ್ಲ. ಆದರೆ ತೆಲಗಿ ಸಾವಿಗೀಡಾದ ಬಳಿಕ ಅಜೀಂ, ಸಹೋದರನನ್ನು ನೋಡಲು ಬಂದಾಗ, ನಿಮ್ಮ ಅವಶ್ಯಕತೆ ನಮಗಿಲ್ಲ ಎಂದಿದ್ದಾರೆ. ಇದರಿಂದಾಗಿ ಬೇಸರಗೊಂಡ ಅಜೀಂ ಕೂಡಲೆ ಮನೆಯಿಂದ ಹೊರನಡೆದ ಪ್ರಸಂಗ ನಡೆದಿದೆ.

Leave a Reply

Your email address will not be published.