ಪ್ರಭಾಸ್‌ ಇಷ್ಟು ಸಂಭಾವನೆ ಕೇಳಿದ್ದೇ ತಪ್ಪಾ..? ಕರಣ್‌ ಜೋಹರ್ ಇವರನ್ನು ಬೇಡ ಎನ್ನಲು ಕಾರಣವೇನು ?

ಬಾಹುಬಲಿ ಸಿನಿಮಾದ ಮೂಲಕ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್‌ ನಟ, ಯುವ ಜನತೆಯ ಹಾಟ್‌ ಫೇವರೇಟ್‌ ಪ್ರಭಾಸ್‌ ಮತ್ತೆ ಸುದ್ದಿಯಾಗಿದ್ದಾರೆ. ತಮ್ಮ ನಟನೆಯ ಮೂಲಕ ಜನರನ್ನು ಮಂತ್ರಮುಗ್ದಗೊಳಿಸಿದ್ದ ಪ್ರಭಾಸ್‌ಗೆ ತೆಲುಗು ಮಾತ್ರವಲ್ಲ, ಬಾಲಿವುಡ್‌ನಿಂದಲೂ ಬೇಡಿಕೆ ಬರಲು ಶುರುವಾಗಿದೆ.

ಅಮರೇಂದ್ರ ಬಾಹುಬಲಿಯಾಗಿ ಮಾಹಿಷ್ಮತಿ ಸಾಮ್ರಾಜ್ಯದಲ್ಲಿ ಮೆರೆದಿದ್ದ ಪ್ರಭಾಸ್‌, ಬಾಲಿವುಡ್‌ನಲ್ಲೂ ಹಂಗಾಮ ಮಾಡುತ್ತಾರೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದಂತೂ ಸತ್ಯ.
ಬಾಹುಬಲಿ ಚಿತ್ರದ ಹಿಂದಿ ರಿಮೇಕನ್ನು ಬಿಡುಗಡೆ ಮಾಡಿದ್ದ ಬಾಲಿವುಡ್‌ನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ, ರಿಯಾಲಿಟಿ ಶೋಗಳ ನಿರೂಪಕ, ಸಂಭಾಷಣೆಕಾರ, ಕಾಸ್ಟ್ಯೂಮ್‌ ವಿನ್ಯಾಸಕ ಕರಣ್‌ ಜೋಹರ್, ಪ್ರಭಾಸ್‌ರನ್ನು ಹಿಂದಿ ಸಿನಿಮಾದಲ್ಲಿ ತಮ್ಮದೇ “ಧರ್ಮ” ಎಂಬ ಬ್ಯಾನರ್‌ನಲ್ಲಿ ಭರ್ಜರಿಯಾಗಿ ಲಾಂಚ್ ಮಾಡಬೇಕು ಎಂದುಕೊಂಡಿದ್ದರು. ಇದಕ್ಕಾಗಿ ಅವರು ಪ್ರಭಾಸ್ ಅವರನ್ನು ಭೇಟಿಯೂ ಆಗಿದ್ದರು.

ಆದರೆ ಅವರ ಯೋಜನೆ ಯಾಕೋ ಕೈಗೂಡುವಂತೆ ಕಾಣುತ್ತಿಲ್ಲ. ಬಹುಮುಖ ಪ್ರತಿಭೆ ಕರಣ್ ಜೋಹರ್‌ ಅವರ ಸಿನಿಮಾಗೆ ಪ್ರಭಾಸ್ ಹೆಚ್ಚಿನ ಸಂಭಾವನೆ ಕೇಳಿದ್ದೇ, ಯೋಜನೆ ಕೈಬಿಡಲು ಕಾರಣವಂತೆ.
ಹೌದು ನಿರ್ದೇಶಕ ರಾಜಮೌಳಿ, ಬಾಹುಬಲಿ ಸಿನಿಮಾದ ಮೂಲಕ ಪ್ರಭಾಸ್‌ರನ್ನು ಅದ್ಭುತವಾಗಿ ತೋರಿಸಿದ್ದಾರೆ. ಅಲ್ಲದೆ ಅಂತಹ ಮತ್ತೊಂದು ಸಿನಿಮಾ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಬರುತ್ತದೋ ಇಲ್ಲವೋ ಗೊತ್ತಿಲ್ಲ. ತೆಲುಗಿನಲ್ಲಿ ಪ್ರಭಾಸ್ ಅಭಿಮಾನಿಗಳು ಹೆಚ್ಚಿದ್ದಾರೆ ನಿಜ. ಆದರೆ ಬಾಲಿವುಡ್‌ನಲ್ಲಿ ಪ್ರಭಾಸ್ ಇನ್ನೂ ಗಟ್ಟಿಯಾಗಿ ನೆಲೆಯೂರಲು ಸಾಕಷ್ಟು ಸಮಯ ಬೇಕಿದೆ.
ಅವರು ದಕ್ಷಿಣ ಭಾರತದಲ್ಲಿ ತಮ್ಮ ಸಂಭಾವನೆಯಲ್ಲಿ 30 ಕೋಟಿಗೆ ಏರಿಸಿದ್ದಾರೆ. ಅದೇ ರೀತಿ ಬಾಲಿವುಡ್‌ನಲ್ಲಿ ಬಂದ ಆಫರ್‌ಗೆ ನೋ ಎನ್ನದೆ 20 ಕೋಟಿ ಸಂಭಾವನೆ ಕೇಳಿದ್ದಾರೆ. ಆದರೆ ಅದಕ್ಕೆ ಕರಣ್ ಜೋಹರ್ ಒಪ್ಪಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ದಕ್ಷಿಣ ಭಾರತದಲ್ಲಿ ಸೂಪರ್‌ ಸ್ಟಾರ್ ರಜನೀಕಾಂತ್ ಸಹ ಅಷ್ಟು ಹೆಚ್ಚಿಗೆ ಸಂಭಾವನೆ ಪಡೆಯುತ್ತಿಲ್ಲ. ಆದರೆ ಪ್ರಭಾಸ್ ಹೆಚ್ಚಿನ ಸಂಭಾವನೆ ಕೇಳಿದ್ದೇ, ಯೋಜನೆ ಕೈಬಿಡಲು ಕಾರಣವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com