ಕಾಂಗ್ರೆಸ್‌ ನಡಿಗೆ ಜನರ ಬಳಿಗೆ ಕಾರ್ಯಕ್ರಮ ಪ್ರಾರಂಭಿಸಿದ್ದು ನಾನು : ಪರಮೇಶ್ವರ್‌

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಏಳು ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಜಿ. ಪರಮೇಶ್ವರ್‌ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಪರಮೇಶ್ವರ್‌, 2010 ಅಕ್ಟೋಬರ್ 29 ರಂದು ಅಧ್ಯಕ್ಷನನ್ನಾಗಿ ನೇಮಕ ಮಾಡಿತ್ತು. ಸೋನಿಯಾ ಗಾಂಧಿ ನನಗೆ ಜವಾಬ್ದಾರಿ ನೀಡಿದ್ದರು. ಕೊಟ್ಟ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ. ಎಲ್ಲರನ್ನೂ ಒಮ್ಮತಕ್ಕೆ ತೆಗೆದುಕೊಂಡು ಮುನ್ನಡೆಸಿದ್ದೇನೆ. ಪಕ್ಷವನ್ನ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ನಾನು.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೆವು. ಒಬ್ಬರೇ ಹೋಗುವುದು ಸರಿಯಲ್ಲವೆಂದು ಈ ನಿರ್ಧಾರ ತೆಗೆದುಕೊಂಡಿದ್ದೆವು. ಒಗ್ಗಟ್ಟಾಗಿ ಹೋದರೆ ಜಯ ಎಂಬುದು ನಮ್ಮ ನಿಲುವಾಗಿತ್ತು ಎಂದಿದ್ದಾರೆ.

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಜನರಿಗೆ ನಮ್ಮ ಯೋಜನೆ ತಲುಪಿಸಬೇಕಿದೆ. ಹೀಗಾಗಿ ಮನೆಮನೆಗೆ ಕಾಂಗ್ರೆಸ್ ನಡಿಗೆ ಹಮ್ಮಿಕೊಂಡಿದ್ದೇವೆ. 6. 50 ಲಕ್ಷ ಕಾರ್ಯಕರ್ತರು ಇದಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಯೋಜನೆಗಳನ್ನ ಅವರು ಮನೆಮನೆಗೆ ತಲುಪಿಸುತ್ತಿದ್ದಾರೆ. ಇದು ಪಕ್ಷದ ಮಾಸ್ ಮೂವ್ ಮೆಂಟ್‌ ಎಂದಿದ್ದಾರೆ.

ಜಾರ್ಜ್ ವಿರುದ್ಧ ಸಿಬಿಐ ಎಫ್ ಐ ಆರ್ ದಾಖಲು ವಿಚಾರ ಸಂಬಂದ ಹೇಳಿಕೆ ನೀಡಿದ ಪರಮೇಶ್ವರ್‌, ಒಂದು ಭಾರಿ ಎಫ್ ಐ ಆರ್ ದಾಖಲಾದರೆ ಮತ್ತೆ ಎಫ್ ಐ ಆರ್ ಮಾಡಲು ಅವಕಾಶವಿಲ್ಲ. ಸುಪ್ರೀಂ ಆದೇಶದ  ಹಿನ್ನೆಲೆಯಲ್ಲಿ ಸಿಬಿಐ ಮತ್ತೆ ಪ್ರಕರಣವನ್ನು ರೀ ರಿಜಿಸ್ಟರ್ ಮಾಡಿದೆ. ರಾಜಕೀಯಕ್ಕೆ ಈ ವಿಚಾರ ಬಳಸಿಕೊಳ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com