ವರ್ಷಪೂರ್ತಿ ಕೊಳೆತ ಥಾಯ್ಲೆಂಡ್ ದೊರೆಯ ದೇಹಕ್ಕೆ ಇಂದು ಅಗ್ನಿಸ್ಪರ್ಶ !!!

ಬ್ಯಾಂಕಾಕ್ : ಕಳೆದ ಒಂದು ವರ್ಷದ ಹಿಂದೆ ಥಾಯ್ಲೆಂಡ್ ದೊರೆ ಭೂಮಿಬೋಲ್ ಅದುಲ್ಯದೇಝ್‌ ನಿಧನರಾಗಿದ್ದು, ಇಂದು ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಒಂದು ವರ್ಷಗಶಳ ಹಿಂದೆ ಅಂದರೆ ತಮ್ಮ 88ನೇ ವಯಸ್ಸಿಗೆ ಭೂಮಿಬೋಲ್‌ ವಿಧಿವಶರಾಗಿದ್ದರು. ಜನಾನುರಾಗಿದ್ದ ಅವರು ಚಕ್ರಿ ಸಾಮ್ರಾಜ್ಯದ 9ನೇ ಸಾಮ್ರಾಟರಾಗಿ ಆಡಳಿತ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೃತದೇಹವನ್ನು ಒಂದು  ವರ್ಷದಿಂದ ಥಾಯ್ಲೆಂಡ್ ಕಾಪಾಡಿಕೊಂಡು ಬಂದು ಶೋಕಾಚರಣೆ ನಡೆಸಿದ್ದು, ಇಂದು ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಬೌದ್ಧ ಧರ್ಮದ ಅನುಸಾರವಾಗಿ ಎಲ್ಲಾ ವಿಧಿವಿದಾನಗಳೂ ಪೂರ್ಣಗೊಂಡಿದೆ. ಇಂದು ಥಾಯ್ಲೆಂಡ್‌ ಪ್ರಮುಖ ಬೀದಿಗಳಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ನಡೆಸಲಾಯಿತು. ಭೂಮಿಬೋಲ್‌ ಅವರ ಮಗ ಮಹಾ ವಜೀರಲಾಂಗ್‌ಕರ್ನ್‌ ತಂದೆಯ ಚಿತೆಗೆ ಬೆಂಕಿ ಇಡಲಿದ್ದಾರೆ.

ಇನ್ನು ಮೃತದೇಹವನ್ನು ಹೊತ್ತಿರುವ ರಥವನ್ನು 18ನೇ ಶತಮಾನದಲ್ಲಿ ಬಳಕೆ ಮಾಡಲಾಗಿತ್ತು. ಸುಮಾರು 14 ಟನ್‌ ತೂಕದ ಈ ರಥವನ್ನು 200 ಸೈನಿಕರು ಎಳೆಯಲಿದ್ದಾರೆ. ಅಲ್ಲದೆ ತಮ್ಮ ನೆಚ್ಚಿನ ರಾಜನ ಅಂತಿಮ ದರ್ಶನ ಪಡೆಯಲು 25ಲಕ್ಷಕ್ಕೂ ಅಧಿಕ ಮಂದಿ ಸೇರುವ ಸಾಧ್ಯತೆ ಇದೆ.

 

ಅಲ್ಲದೆ ಥಾಯ್ಲೆಂಡ್‌ನಲ್ಲಿಂದು ಸರ್ಕಾರಿ ರಜೆ ಘೋಷಿಸಲಾಗಿದ್ದು, 40 ಕ್ಕೂ ಅಧಿಕ ದೇಶದಿಂದ ಗಣ್ಯರು ಆಗಮಿಸಲಿದ್ದಾರೆ.

ವರ್ಷಗಳ ಕಾಲ ಕಳೇಬರ ರಕ್ಷಿಸಿದ ಥಾಯ್ಲೆಂಡ್‌ ಜನತೆ

 

ಥಾಯ್ಲೆಂಡ್‌ನಲ್ಲಿ ಸತ್ತವರ ಕಳೇಬರವನ್ನು ರಕ್ಷಿಸಿಡುವ ವಾಡಿಕೆಯಿದೆ. ಅವರವರ ಆರ್ಥಿಕ ಸ್ಥಿತಿಗತಿಯ ಮೇಲೆ ಎಷ್ಟು ದಿನ ಕಳೇಬರವನ್ನು ರಕ್ಷಿಸಿಡಬಹುದು ಎಂದು ನಿರ್ಧರಿಸಲಾಗುತ್ತದೆ. ದೇಹ ಕೊಳೆಯದಂತೆ ಮಾಡಲು ಪಾರ್ಮಲಿನ್‌ ಎಂಬ ಇಂಜೆಕ್ಷನ್‌ ನೀಡಲಾಗುತ್ತದೆ. ಆದರೆ ಥಾಯ್ಲೆಂಡ್‌ನ ರಾಜಮನೆತನದಲ್ಲಿ ಮೃತ ದೇಹಗಳನ್ನು ಬದ್ರವಾಗಿ ಮುಚ್ಚಲ್ಪಟ್ಟ ಬೆಳ್ಳಿ ಪೆಟ್ಟಿಗೆಯಲ್ಲಿ ಕೊಳೆಯಲು ಬಿಡುತ್ತಾರೆ. ಅದರ ಮೇಲೆ ಚಿನ್ನದ ಲೇಪ ಹಚ್ಚಿರುತ್ತಾರೆ. ಬಳಿಕ ಆ ಪೆಟ್ಟಿಗೆಯೊಳಗೆ ಕೊಳೆತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ನಂತರ ಆ ಪೆಟ್ಟಿಗೆಯನ್ನು ಕರಗಿಸಿ ಬುದ್ದನ ವಿಗ್ರಹ ಮಾಡಲಾಗುತ್ತದೆ.

 

 

Social Media Auto Publish Powered By : XYZScripts.com