WATCH : ಸ್ಟಂಪ್ ಮೈಕಿನಲ್ಲಿ ಮಾಹಿ ಮಾತು : ಕೊಹ್ಲಿಗೆ ಧೋನಿ ಹೇಳಿದ್ದೇನು..?

ಧೋನಿ ಈಗ ಭಾರತ ತಂಡದ ಕ್ಯಾಪ್ಟನ್ ಅಲ್ಲ ಅನ್ನುವುದು ನಿಜವಾದರೂ. ಪಂದ್ಯದ ಸಂದರ್ಭದಲ್ಲಿ ಕೊಹ್ಲಿ, ಧೋನಿಯ ಸಲಹೆ ಕೇಳುತ್ತಿರುತ್ತಾರೆ. ಮಾಹಿ ಕೂಡ ಸ್ಟಂಪ್ ಹಿಂದೆ ನಿಂತುಕೊಂಡೇ, ಯಾವ ಫೀಲ್ಡರನ್ನು ಎಲ್ಲಿ ನಿಲ್ಲಿಸಬೇಕು ಎಂಬುದರ ಬಗ್ಗೆ, ಯಾರಿಂದ ಬೌಲಿಂಗ್ ಮಾಡಿಸಬೇಕು ಅಂತೆಲ್ಲ ಸಲಹೆ, ಸೂಚನೆ ನೀಡುತ್ತಿರುತ್ತಾರೆ. ಬೌಲರ್ ಗಳಿಗೂ ಯಾವ ರೀತಿ ಬೌಲ್ ಮಾಡಬೇಕೆಂದು ಸಲಹೆ ಕೊಡುತ್ತಾರೆ. ಇವೆಲ್ಲ ಹಿಂದಿಯಲ್ಲಿ ನಡೆಯುವುದರಿಂದ ಎದುರಾಳಿ ತಂಡದವರಿಗೆ ಧೋನಿ ತಂತ್ರ ತಿಳಿಯುವುದೂ ಇಲ್ಲ.

ಕೆಲವೊಮ್ಮೆ ಧೋನಿಯ ಈ ಮಾತುಗಳು ಸ್ಟಂಪ್ ಮೈಕಿನಲ್ಲಿ ರೆಕಾರ್ಡ್ ಆಗುತ್ತವೆ. ಮ್ಯಾಚ್ ನೋಡುವಾಗ ನೀವೂ ಇದನ್ನು ಗಮನಿಸಿರಬಹುದು. ವಿಕೆಟ್ ಕೀಪಿಂಗ್ ಮಾಡುವಾಗ ಧೋನಿ ಒಮ್ಮೆ ಕೊಹ್ಲಿಯನ್ನು ‘ಚೀಕು’ ಎಂದು ಸಂಬೋಧಿಸಿದ್ದರು. ಅಂದಿನಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ನಿಕ್ ನೇಮ್ ‘ಚೀಕು’ ಅನ್ನೋದು ಕ್ರಿಕೆಟ್ ಅಭಿಮಾನಿಗಳಿಗೆಲ್ಲರಿಗೂ ಗೊತ್ತಾಗಿ ಹೋಯಿತು. ಅದಾದ ಬಳಿಕ ವಿರಾಟ್ ಎಲ್ಲಿ ಹೋದರೂ ಜನ ‘ಚೀಕು’ ಅಂತಲೇ ಕರೆಯಲು ಶುರುಮಾಡಿದ್ದರು.

ಪುಣೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿಯೊಂದಿಗೆ ಕೆಲ ಮಾತುಗಳು ರೆಕಾರ್ಡ್ ಆಗಿವೆ. ಮಹೇಂದ್ರ ಸಿಂಗ್ ಧೋನಿ, ಕೊಹ್ಲಿಯನ್ನು ‘ಚೀಕು’ ಎಂದು ಕರೆದಿರುವುದು ಮತ್ತೊಮ್ಮೆ ರೆಕಾರ್ಡ್ ಆಗಿದೆ. ಈ ವಿಡಿಯೋದಲ್ಲಿ ಧೋನಿ ಹಿಂದಿಯಲ್ಲಿ ಕೇದಾರ್ ಜಾಧವ್ ಹಾಗೂ ಕೊಹ್ಲಿಗೆ ಹೇಳಿದ ಮಾತುಗಳಿವೆ ಕೇಳಿಸಿಕೊಳ್ಳಿ..

 

Social Media Auto Publish Powered By : XYZScripts.com