ರಣಜಿ ಟ್ರೋಫಿ : ಶ್ರೇಯಸ್ ದಾಳಿಗೆ ಕುಸಿದ ಹೈದರಾಬಾದ್ : ಕರ್ನಾಟಕಕ್ಕೆ 174 ರನ್ ಮುನ್ನಡೆ

ಶಿವಮೊಗ್ಗದಲ್ಲಿ ಹೈದರಾಬಾದ್ ಹಾಗೂ ಕರ್ನಾಟಕ ತಂಡಗಳ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ, ಎರಡನೇ ದಿನದಂತ್ಯಕ್ಕೆ 174 ರನ್ ಮುನ್ನಡೆ ಸಾಧಿಸಿದೆ. ಮಹಮ್ಮದ್ ಸಿರಾಜ್ ದಾಳಿಗೆ ಸಿಲುಕಿದ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 183 ರನ್ ಗಳಿಗೆ ಆಲೌಟ್ ಆಗಿತ್ತು.

ಮೊದಲ ಇನ್ನಿಂಗ್ಸಿನಲ್ಲಿ 136 ರನ್ ಗೆ ಆಲೌಟ್ ಆದ ಹೈದರಾಬಾದ್ 47 ರನ್ ಹಿನ್ನಡೆ ಅನುಭವಿಸಿದೆ. ಕೊಲ್ಲ ಸುಮಂತ್ 68 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ 5 ಹಾಗೂ ಕೆ ಗೌತಮ್ 3 ವಿಕೆಟ್ ಪಡೆದು ಮಿಂಚಿದರು.

2ನೇ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿದೆ. ಮಯಂಕ್ ಅಗರವಾಲ್ ಹಾಗೂ ಕೆ ಗೌತಮ್ ಶೂನ್ಯಕ್ಕೆ  ಔಟಾದರೆ, ಆರ್ ಸಮರ್ಥ್ 29, ಕೆ ಎಲ್ ರಾಹುಲ್ 23 ರನ್ ಗಳಿಸಿದರು. ದಿನದಂತ್ಯಕ್ಕೆ ಕರುಣ್ ನಾಯರ್ 37,  ಹಾಗೂ ಸ್ಟುವರ್ಟ್ ಬಿನ್ನಿ 26 ರನ್ ಬಾರಿಸಿ ಕ್ರೀಸ್ ನಲ್ಲಿದ್ದಾರೆ. ಹೈದರಾಬಾದ್ ಪರ ಮೆಹದಿ ಹಸನ್ 4 ವಿಕೆಟ್ ಉರುಳಿಸಿದ್ದಾರೆ.

ಇನ್ನು ಮೂರು ದಿನಗಳ ಆಟ ಬಾಕಿಯಿದ್ದು ಮುನ್ನಡೆ ಹೆಚ್ಚಿಸಿಕೊಳ್ಳಲು ತವಕಿಸುತ್ತಿರುವ ಕರ್ನಾಟಕ, ಗೆಲುವಿನ ಲೆಕ್ಕಾಚಾರ ನಡೆಸಿದೆ.

Social Media Auto Publish Powered By : XYZScripts.com