U -17 ಫಿಫಾ ವಿಶ್ವಕಪ್ : ಮಾಲಿ ವಿರುದ್ಧ 3-1 ಜಯಗಳಿಸಿ ಫೈನಲ್ ತಲುಪಿದ ಸ್ಪೇನ್

ಅಂಡರ್ – 17 ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ಮಾಲಿ ವಿರುದ್ಧ ಗೆಲುವು ಸಾಧಿಸಿದ ಯುರೋಪಿಯನ್ ಚಾಂಪಿಯನ್ಸ್ ಸ್ಪೇನ್ ತಂಡ ಫೈನಲ್ ತಲುಪಿದೆ. ಬುಧವಾರ ಮುಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ 3-1 ಅಂತರದಿಂದ ಜಯಗಳಿಸಿದ ಸ್ಪೇನ್ ನಾಲ್ಕನೇ ಬಾರಿಗೆ U-17  ವಿಶ್ವಕಪ್ ಫೈನಲ್ ತಲುಪಿದೆ.

Image result for spain mali semifinal

ಪಂದ್ಯದ ಮೊದಲಾರ್ಧದಲ್ಲೇ ಸ್ಪೇನ್ ಪರ ಎರಡು ಗೋಲ್ ದಾಖಲಾದವು. 19ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಸ್ಪೇನ್ ಸ್ಟ್ರೈಕರ್ ಅಬೇಲ್ ರೂಯಿಜ್ ಮೊದಲ ಗೋಲ್ ಬಾರಿಸಿದರು. ನಂತರ 45 ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಹೊಡೆದ ರೂಯಿಜ್ 2-0 ಮುನ್ನಡೆ ಒದಗಿಸಿದರು. ಬಳಿಕ ಫೆರ್ರನ್ ಟೊರೆಸ್ ಹೆಡರ್ ಮೂಲಕ ಮೂರನೆಯ ಗೋಲು ಬಾರಿಸಿದರು. 74 ನಿಮಿಷದಲ್ಲಿ ಮಾಲಿ ಪರವಾಗಿ ಲಸ್ಸಾನಾ ಮೊದಲ ಗೋಲ್ ಹೊಡೆದರಾದರೂ, ಸೋಲು ತಪ್ಪಿಸಲಾಗಲಿಲ್ಲ.

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಬ್ರೆಜಿಲ್ ತಂಡವನ್ನು ಮಣಿಸಿರುವ ಇಂಗ್ಲೆಂಡ್ ತಂಡ ಫೈನಲ್ ಗೆ ಲಗ್ಗೆಯಿಟ್ಟಿದೆ. ಅಕ್ಟೋಬರ್ 28 ರಂದು ಕೋಲ್ಕತಾದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸ್ಪೇನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಫಿಫಾ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸಿದೆ.

Social Media Auto Publish Powered By : XYZScripts.com