‘ ಠುಮ್ರೀ ಕ್ವೀನ್ ‘ ಖ್ಯಾತಿಯ ಶಾಸ್ತ್ರೀಯ ಸಂಗೀತ ಗಾಯಕಿ ಗಿರಿಜಾ ದೇವಿ ವಿಧಿವಶ..

‘ಠುಮ್ರೀ ಕ್ವೀನ್’ ಎಂದೇ ಖ್ಯಾತಿಯಾಗಿದ್ದ, ಶಾಸ್ತ್ರೀಯ ಸಂಗೀತ ಗಾಯಕಿ ಗಿರಿಜಾ ದೇವಿ ಅವರು ಮಂಗಳವಾರ ಕೋಲ್ಕತಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 88 ವರ್ಷದ ಗಿರಿಜಾ ದೇವಿಯವರಿಗೆ ಮಂಗಳವಾರ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡ ಕಾರಣ ಕೋಲ್ಕತಾದ ಬಿಎಮ್ ಬಿರ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾಯಂಕಾಲ ವಿಧಿವಶರಾಗಿದ್ದಾರೆ.

Image result for girija devi

ಗಿರಿಜಾ ದೇವಿ ಅವರು 1972 ರಲ್ಲಿ  ಪದ್ಮಶ್ರೀ, 1989 ರಲ್ಲಿ ಪದ್ಮಭೂಷಣ ಹಾಗೂ 2016 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 1977 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಪಡೆದಿದ್ದ ಇವರು ಹಾಗೂ 2010 ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಫೆಲೋಷಿಪ್ ಪಡೆದಿದ್ದರು.

Related image

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸೇನಿಯಾ ಹಾಗೂ ಬನಾರಸ್ ಘರಾನಾಕ್ಕೆ ಸೇರಿದವರಾಗಿದ್ದ ಇವರು, ಖಯಾಲ್ ಗಾಯನವಷ್ಟೇ ಅಲ್ಲದೆ ಕಜ್ರಿ, ಚೈತಿ, ಹೋಲಿ, ಟಪ್ಪಾ, ಜನಪದ ಸಂಗೀತ ಹಾಡುಗಾರಿಕೆಯಲ್ಲೂ ಸಿದ್ಧಹಸ್ತರಾಗಿದ್ದರು.

ಮಹಾನ್ ಗಾಯಕಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಟ ಅನುಪಮ್ ಖೇರ್, ಲೇಖಕ ಜಾವೇದ್ ಅಖ್ತರ್, ಗಾಯಕ ಪಂಕಜ್ ಉಧಾಸ್ ಸಂತಾಪ ಸೂಚಿಸಿದ್ದಾರೆ.

 

Social Media Auto Publish Powered By : XYZScripts.com