ಮಧ್ಯಪ್ರದೇಶದ ರಸ್ತೆಗಳು ಅಮೇರಿಕದ ರಸ್ತೆಗಳಿಗಿಂತ ಚೆನ್ನಾಗಿವೆ : ಶಿವರಾಜ್ ಸಿಂಗ್ ಚೌಹಾಣ್

ಮಂಗಳವಾರ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ‘ ಮಧ್ಯಪ್ರದೇಶ ರಾಜ್ಯದಲ್ಲಿನ ರಸ್ತೆಗಳು ಅಮೇರಿಕದಲ್ಲಿನ ರಸ್ತೆಗಳಿಗಿಂತ ಚೆನ್ನಾಗಿವೆ ‘ ಎಂದು ಹೇಳಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದಲ್ಲಿ ಅಮೇರಿಕದ ಬಂಡವಾಳ ಹೂಡಿಕೆಗೆ ಆಹ್ವಾನಿಸಲು, ಆರು ದಿನಗಳ ಅಮೇರಿಕಾ ಪ್ರವಾಸ ಕೈಗೊಂಡಿದ್ದಾರೆ.

ವಾಷಿಂಗ್ಟನ್ನಿನಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಚೌಹಾಣ್ ‘ ನಾನು ವಾಷಿಂಗ್ಟನ್ ಏರ್ಪೋರ್ಟಿನಲ್ಲಿ ಇಳಿದು ರಸ್ತೆಯ ಮೇಲೆ ಸಂಚರಿಸಿದಾಗ, ಮಧ್ಯ ಪ್ರದೇಶದಲ್ಲಿನ ರಸ್ತೆಗಳು ಅಮೇರಿಕದ ರಸ್ತೆಗಳಿಗಿಂತ ಚೆನ್ನಾಗಿವೆ ಅನಿಸಿತು. ನಮ್ಮ ರಸ್ತೆ ಸಂಪರ್ಕವನ್ನು ಉತ್ತಮ ಪಡಿಸುವತ್ತ ಗಮನ ಹರಿಸಿದೆ. ರಾಜ್ಯದಲ್ಲಿ 1.75 ಲಕ್ಷ ಕಿಲೋ ಮೀಟರ್ ರಸ್ತೆಗಳ ನಿರ್ಮಿಸಿದ್ದೇವೆ ‘ ಎಂದರು.

‘ ಕೆಲವು ವರ್ಷಗಳ ಹಿಂದೆ ಮಧ್ಯ ಪ್ರದೇಶವನ್ನು ‘ಬಿಮಾರು’ ಎಂದು ಕರೆಯಲಾಗುತ್ತಿತ್ತು. 12 ವರ್ಷಗಳ ಹಿಂದೆ ನಾನು ಮುಖ್ಯಮಂತ್ರಿಯಾದಾಗ, ಮೂಲ ಸೌಕರ್ಯಗಳ ಅಭಿವೃದ್ಧಿಯ ಹೊರತು ಯಾವ ರಾಜ್ಯವೂ ಸಂಪೂರ್ಣ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿತ್ತು. ನಮ್ಮ ಮೊದಲ ಆದ್ಯತೆ ರಸ್ತೆಗಳನ್ನು ನಿರ್ಮಿಸುವುದಾಗಿತ್ತು ‘ ಎಂದಿದ್ದಾರೆ.

 

Social Media Auto Publish Powered By : XYZScripts.com