ಆಧಾರ್ ಗೆ ಲಿಂಕ್ ಮಾಡಲ್ಲ, ಮೊಬೈಲ್ ಕನೆಕ್ಷನ್ ಕಟ್ ಮಾಡಲಿ : ಮಮತಾ ಬ್ಯಾನರ್ಜಿ

ಆಧಾರ್ ಕಾರ್ಡಿಗೆ ಮೊಬೈಲ್ ಫೋನ್ ನಂಬರನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ. ಬುಧವಾರ ಈ ಬಗ್ಗೆ ಮಾತನಾಡಿರುವ ಮಮತಾ ಬ್ಯಾನರ್ಜಿ ‘ ಆಧಾರ್ ಲಿಂಕ್ ಮಾಡದಿದ್ದರೆ ಮೊಬೈಲ್ ಫೋನ್ ಕನೆಕ್ಷನ್ ರದ್ದುಗೊಳಿಸುತ್ತಾರಾ..? ಧಾರಾಳವಾಗಿ ಮಾಡಲಿ, ಆದರೆ ಆಧಾರ್ ಕಾರ್ಡಿಗೆ ಲಿಂಕ್ ಮಾತ್ರ ಮಾಡುವುದಿಲ್ಲ ‘ ಎಂದಿದ್ದಾರೆ.

ಈ ಹಿಂದೆ ಆಧಾರ್ ಕಾರ್ಡ್ ಹೊಂದುವುದನ್ನು ಪ್ರತಿಯೊಬ್ಬರಿಗೂ ಕಡ್ಡಾಯಗೊಳಿಸಿದ್ದರ ವಿರುದ್ಧವೂ ಮಮತಾ ಧ್ವನಿಯೆತ್ತಿದ್ದರು. ‘ ಇದು ಬಡವರ ವಿರೋಧಿ ಯೋಜನೆಯಾಗಿದ್ದು, ಇದರಲ್ಲಿ ತೀರ ವೈಯಕ್ತಿಕ ಮಾಹಿತಿಗಳ ಬಗ್ಗೆ ಕೇಳಲಾಗುತ್ತದೆ ‘ ಎಂದಿದ್ದರು.

ಆಧಾರ್ ಕಾರ್ಡನ್ನು ಬ್ಯಾಂಕ್ ಅಕೌಂಟ್ ಹಾಗೂ ಮೊಬೈಲ್ ನಂಬರಿನೊಂದಿಗೆ ಕಡ್ಡಾಯವಾಗಿ ಲಿಂಕ್ ಮಾಡುವುದರ ವಿರುದ್ಧ ಕೋರ್ಟಿನಲ್ಲಿ ಹಲವಾರು ಜನ ಪೆಟಿಷನ್ ಸಲ್ಲಿಸಿದ್ದಾರೆ. ಇದರ ವಿಚಾರಣೆಯನ್ನು ಅಪೆಕ್ಸ್ ಕೋರ್ಟ್ ಅಕ್ಟೋಬರ್ 30 ರಂದು ನಡೆಸಲಿದೆ.

Social Media Auto Publish Powered By : XYZScripts.com