ಹೂತಿದ್ದ ಶವವನ್ನು ಮೇಲೆತ್ತಿ ಚಿನ್ನ ದೋಚಿ ಪರಾರಿಯಾದ ದುಷ್ಕರ್ಮಿಗಳು !

ಕಲಬುರ್ಗಿ : ಚಿನ್ನಕ್ಕಾಗಿ ಹೂತಿದ್ದ ಶವವನ್ನೇ ಹೊರತೆಗೆದು ಅದರಲ್ಲಿದ್ದ ಚಿನ್ನಾಬರಣವನ್ನು ಕಳವು ಮಾಡಿದ ಪ್ರಕರಣ ಕಲಬುರ್ಗಿಯ ಖಜೂರಿ ಗ್ರಾಮದಲ್ಲಿ ನಡೆದಿದೆ. ಕಳೆದ ಐದು ದಿನಗಳ ಹಿಂದೆ ಖಜೂರಿಯಲ್ಲಿ ಪ್ರೇಮಾ ಬಾಯಿ ಎಂಬ 75 ವರ್ಷದ ಅಜ್ಜಿ ಅನಾರೋಗ್ಯದ ಕಾರಣದಿಂದ ಸಾವಿಗೀಡಾಗಿದ್ದರು. ಆಕೆಗೆ ಮಕ್ಕಳಿರದ ಕಾರಣ ಆಕೆಯ ಮೈಮೇಲಿದ್ದ ಒಡವೆಗಳ ಜೊತೆಗೇ  ಆಕೆಯನ್ನು ಮಣ್ಣು ಮಾಡಿದ್ದರು.

ಐದು ದಿನಗಳ ಬಳಿಕ ಶವವನ್ನು ಹೊರತೆಗೆದು ಅದರಲ್ಲಿದ್ದ ಚಿನ್ನವನ್ನು ದುಷ್ಕರ್ಮಿಗಳು ದೋಚಿ, ಶವವನ್ನು ಅಲಲೇ ಬಿಟ್ಟು ಪರಾರಿಯಾಗಿದ್ದಾರೆ. ಪರಿಚಿತ ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಗುಮಾನಿ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

 

Social Media Auto Publish Powered By : XYZScripts.com