ನಾನು ರೈತನಾಗೇ ಹುಟ್ಟಿದ್ದೇನೆ. ರೈತನಾಗೇ ಸಾಯುತ್ತೇನೆ : ಎಚ್‌.ಡಿ ದೇವೇಗೌಡ

ಚಿತ್ರದುರ್ಗ : ನಾನು ರೈತನಾಗೇ ಹುಟ್ಟಿದ್ದೇನೆ. ರೈತನಾಗೇ ಸಾಯುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ತಿಳಿಸಿದ್ದಾರೆ. ಚಿತ್ರದುರ್ಗದ ಭರಮಸಾಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಬಿಜೆಪಿ ಅನವಶ್ಯಕ ವಿಷಯಗಳ ಬಗ್ಗೆ ಕೆಸರೆರಚಾಟ ನಡೆಸುತ್ತಿದ್ದಾರೆ. ಯಾರ ಸುಖಕ್ಕಾಗಿ ಬಿಜೆಪಿ ಪರಿವರ್ತನಾ ಯಾತ್ರೆ ಮಾಡುತ್ತಿದ್ದಾರೆ. ನೀವು ಏನನ್ನು ಪರಿವರ್ತನೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಮೊದಲು ರೈತರ ಆತ್ಮಹತ್ಯೆ ತಡೆಯಲಿ. ಮೋದಿ ವೈಮಾನಿಕ ಸಮೀಕ್ಷೆ ಮಾಡಿದರೆ ಪ್ರಯೋಜನವಿಲ್ಲ. ಕಾಂಗ್ರೆಸ್ ಬಿಜೆಪಿಯವರ ತಿಕ್ಕಾಟ ನೋಡಿ ನೋಡಿ  ಸಾಕಾಗಿ ಹೋಗಿದೆ. ರೈತರನ್ನು ಮರೆತವರನ್ನು ಅಧಿಕಾರದಿಂದ ಕೆಳಗಿಳಿಸುವ ಶಕ್ತಿ ರೈತರಿಗಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಪುಟಗಟ್ಟಲೆ ಜಾಹೀರಾತು ನೀಡಿದರೆ ಲಾಭವಿಲ್ಲ. ರಾಜ್ಯ ಸರ್ಕಾರ ಡ್ರಾಮಾ ಮಾಡುತ್ತಿದೆ. ಇದು ಅವಿವೇಕದ ಪರಮಾವಧಿ ಎಂದಿದ್ದಾರೆ.

Social Media Auto Publish Powered By : XYZScripts.com