ಗಿನ್ನೆಸ್‌ ದಾಖಲೆಯ ಪುಟ ಸೇರಲು ಸಜ್ಜಾಗುತ್ತಿದೆ ಸಸ್ಯಕಾಶಿ ಲಾಲ್‌ಬಾಗ್‌

ಬೆಂಗಳೂರು : ಸಸ್ಯಕಾಸಿ ಲಾಲ್‌ಬಾಗ್‌ ಗಿನ್ನೆಸ್ ದಾಕಲೆ ನಿರ್ಮಿಸಲು ಸಿದ್ದಗೊಂಡಿದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಹಾಗೂ ಮರಗಳ ರಚನೆ, ಕಾರ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮೈ ಟ್ರೀ ಮೈ ಲೈಫ್ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,  ಡಿಸೆಂಬರ್ 9ರಂದು 10,000 ಪ್ರೌಢಶಾಲಾ ವಿದ್ಯಾರ್ಥಿಗಳು ಮರಗಳನ್ನು ತಬ್ಬಿಕೊಂಡು ನಿಲ್ಲಲಿದ್ದಾರೆ.

ಪರಿಸರವಾದಿ ಹಾಗೂ ಉದ್ಯಾನವನಗಳ  ತಾಂತ್ರಿಕ ಸಮಿತಿ ಅಧ್ಯಕ್ಷ ಡಾ. ಎ.ಎನ್ ಯಲ್ಲಪ್ಪರೆಡ್ಡಿ ಿದು ಮುಕಂಡತ್ವ ವಹಿಸಲಿದ್ದಾರೆ. 10 ಸಾವಿರ ಮಕ್ಕಳು ಡಿಸೆಂಬರ್ 9ರಂದು ಲಾಲ್ ಬಾಗ್‌ನಲ್ಲಿ ಮಾನವ ಸರಪಳಿ ನಿರ್ಮಿಸಲಿದ್ದಾರೆ. ಬಳಿಕ ಮರಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಗುತ್ತದೆ. ಈ ವೇಳೆ ಮಕ್ಕಳು ತಮ್ಮನ್ನು ತಾವು ಮರಗಳಂತೆ ಊಹಿಸಿ ಐದಾರು ಮಕ್ಕಳು ಮರಗಳನ್ನು ಅಪ್ಪಿಕೊಳ್ಳಲಿದ್ದಾರೆ.

ಈ ವೇಳೆ  ಒಂದೇ ಒಂದು ಮಗು ಎಚ್ಚರ ತಪ್ಪಿದರೂ ಗಿನ್ನೆಸ್‌ ದಾಖಲೆ ಕೈತಪ್ಪುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮಕ್ಕಳನ್ನು ಸಂಪೂರ್ಣವಾಗಿ ಸಿದ್ಧಗೊಳಿಸಲಾಗುತ್ತಿದೆ.