ಬಾಹುಬಲಿ ಬರ್ತ್‌ಡೇಗೆ ಇಂಟರೆಸ್ಟಿಂಗ್‌ ಉಡುಗೊರೆ ನೀಡಿದ ದೇವಸೇನಾ…….ಏನದು?

ಬಾಹುಬಲಿ ಖ್ಯಾತಿಯ ಪ್ರಭಾಸ್‌ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಾಷಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇದೇ ಸುಸಂದರ್ಭದಲ್ಲಿ ಅಭಿಮಾನಿಗಳಿಗೆ ಪ್ರಭಾಸ್ ಗಿಫ್ಟ್‌ ನೀಡಿದ್ದು, ಅವರ ಮುಂದಿನ ಸಾಹೋ ಚಿತ್ರದ ಫಸ್ಟ್ ಲುಕ್‌ ರಿಲೀಸ್ ಮಾಡಲಾಗಿದೆ.

ಬ್ಲ್ಯಾಕ್‌ ಕೋಟಿನಲ್ಲಿ ಸ್ಟೈಲಿಶ್ ಆಗಿ ಪೋನ್‌ನಲ್ಲಿ ಮಾತನಾಡುತ್ತಾ ಬರುತ್ತಿರುವ ಪ್ರಭಾಸ್‌ ಫಸ್ಟ್‌ ಲುಕ್‌ ನಲ್ಲೇ ಅಭಿಮಾನಿಗಳ ಮನಗೆದ್ದಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ. ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶ್ರದ್ಧಾ ಅಭಿನಯಿಸುತ್ತಿದ್ದಾರೆ.

ಇದರ ಜೊತೆ ಜೊತೆಗೆ ಬಾಹುಬಲಿಯಲ್ಲಿ ದೇವಸೇನಾ ಪಾತ್ರದ ಮೂಲಕ ಮಿಂಚಿದ್ದ ಅನುಷ್ಕಾ, ತನ್ನ ನೆಚ್ಚಿನ ಗೆಳೆಯ ಪ್ರಭಾಸ್ ಬರ್ತ್‌ಡೆ ಡಿಫರೆಂಟ್ ಆಗಿರೋ ಗಿಫ್ಟೊಂದನ್ನು ನೀಡಿದ್ದಾರೆ. ಪ್ರಭಾಸ್‌ಗೆ ಡಿಸೈನರ್ ವಾಚ್ ಎಂದರೆ ಬಹಳ ಇಷ್ಟವಂತೆ. ಆದ್ದರಿಂದ ಪ್ರಭಾಸ್‌ಗೆ ಅನುಷ್ಕಾ ದುಬಾರಿ ಬೆಲೆಯ ಡಿಸೈನರ್ ವಾಚ್‌ ನೀಡಿದ್ದಾರೆ ಅಂತ ಹೇಳಲಾಗುತ್ತಿದೆ.

Social Media Auto Publish Powered By : XYZScripts.com