ಮಲೇಷ್ಯಾ ವಿರುದ್ಧ ಫೈನಲ್ ನಲ್ಲಿ ಜಯ : 10 ವರ್ಷಗಳ ನಂತರ ಭಾರತದ ಮಡಿಲಿಗೆ ಏಷ್ಯಾಕಪ್

ರವಿವಾರ ನಡೆ ಏಷ್ಯಾಕಪ್ ಹಾಕಿ ಫೈನಲ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು 2-1 ರಿಂದ ಮಣಿಸಿದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಢಾಕಾದ ಮೌಲಾನಾ ಭಾಸನಿ ಹಾಕಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡ, 10 ವರ್ಷಗಳ ನಂತರ ಏಷ್ಯಾ ಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಟೂರ್ನಿಯಲ್ಲಿ ಈ ಮೊದಲು ನಡೆದ ಲೀಗ್ ಪಂದ್ಯದಲ್ಲಿಯೂ ಭಾರತ ಮಲೇಷ್ಯ ತಂಡವನ್ನು 2-6 ರಿಂದ ಸೋಲಿಸಿತ್ತು.

Image result for asia cup hockey 2017

ಪಂದ್ಯದ ಮೂರನೇ ನಿಮಿಷದಲ್ಲಿ ಎಸ್ ವಿ ಸುನಿಲ್ ನಿರ್ಮಿಸಿದ ಅವಕಾಶವನ್ನು ಬಳಸಿಕೊಂಡ ರಮನ್ ದೀಪ್ ಸಿಂಗ್ ಭಾರತದ ಪರವಾಗಿ ಮೊದಲ ಗೋಲ್ ಬಾರಿಸಿ ಮುನ್ನಡೆ ದೊರಕಿಸಿದರು. 29 ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ್ ಎರಡನೇ ಗೋಲ್ ದಾಖಲಿಸಿ ಅಂತರವನ್ನು ಮತ್ತಷ್ಟು ಹೆಚ್ಚಿಸಿದರು. ಎರಡನೇ ಅರ್ಧದಲ್ಲಿ 50ನೇ ನಿಮಿಷದಲ್ಲಿ ಮಲೇಷ್ಯಾ ಪರವಾಗಿ ಶಾಹ್ರಿಲ್ ಸಾಬಾ ಗೋಲ್ ಬಾರಿಸಿದರು. ಕೊನೆಯ ಹತ್ತು ನಿಮಿಷಗಳ ಎರಡೂ ತಂಡಗಳು ತಮ್ಮ ಶಕ್ತಿ ಮೀರಿ ಹೋರಾಡಿದರು. ಆದರೆ ಕೊನೆಗೆ ವಿಜಯ ಭಾರತಕ್ಕೆ ಒಲಿಯಿತು.

ಈ ಮುಂಚೆ ಭಾರತ ಹಾಕಿ ತಂಡ 2007ರಲ್ಲಿ ಏಷ್ಯಾಕಪ್ ಜಯಿಸಿತ್ತು. ಭಾರತ ಹಾಗೂ ಪಾಕಿಸ್ತಾನ ತಂಡಗಳು 3 ಬಾರಿ ಏಷ್ಯಾಕಪ್ ಗೆದ್ದಿದ್ದು, ದಕ್ಷಿಣ ಕೋರಿಯಾ 4 ಸಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

Social Media Auto Publish Powered By : XYZScripts.com