ಪಿಡಿಪಿ ತೊರೆದ ಜಮ್ಮು ಮಹರಾಜರ ಮೊಮ್ಮಗ ವಿಕ್ರಮಾದಿತ್ಯ ಸಿಂಗ್

ಶ್ರೀನಗರ : ಜಮ್ಮು-ಕಾಶ್ಮೀರದ ಪಿಡಿಪಿ ಮುಖ್ಯಸ್ಥರಾಗಿದ್ದ ವಿಕ್ರಮಾದಿತ್ಯ ಸಿಂಗ್‌ ಪಕ್ಷ ತೊರೆದಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ವಿಕ್ರಮಾದಿತ್ಯ ಸಿಂಗ್‌, ಜಮ್ಮು ಪ್ರದೇಶದ ಜನತೆಯ ಆಶೋತ್ತರಗಳಿಗೆ ಪಿಡಿಪಿ ಪಕ್ಷ ಸ್ಪಂದಿಸುತ್ತಿಲ್ಲ.  ಆದ್ದರಿಂದ ಪಕ್ಷದಲ್ಲಿರಲು ಕಷ್ಟವೆನಿಸುತ್ತಿದೆ. ಪಕ್ಷದ ಮೇಲೆ ನನಗೆ ಬೇಸರವಾಗಿ ಪಕ್ಷ ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ವಿಧಾನ ಪರಿಷತ್‌ ತೊರೆಯಲು ಘೋಷಿಸಿದ್ದು, ಈ ಕುರಿತು ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

 

Social Media Auto Publish Powered By : XYZScripts.com