ಬಿಗ್‌ಬಾಸ್‌ ಸೀಸನ್‌ 5 : ಮೊದಲ ಎಲಿಮಿನೇಶನ್‌ನಲ್ಲಿ ಮನೆಯಿಂದ ಹೊರನಡೆದ ಸುಮಾ

ಬಿಗ್‌ ಬಾಸ್‌ ಪ್ರಾರಂಭವಾಗಿ ಒಂದು ವಾರ ಕಳೆದಿದ್ದು, ಬಿಗ್‌ ಬಾಸ್‌ ಸೀಸನ್‌ 5ರ ಮೊದಲ ಎಲಿಮಿನೇಷನ್‌ ಶನಿವಾರ ನಡೆದಿದೆ. ಮೊದಲ ಎಲಿಮಿನೇಷನ್ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಬಿಗ್ ಬಾಸ್‌ ಮನೆಯೊಳಗೆ ಸಾಮಾನ್ಯ ಸ್ಪರ್ಧಿಯಾಗಿ ಹೋಗಿದ್ದ ಸುಮಾ ಮನೆಯಿಂದ ಹೊರಬಂದಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ 5ರ ಮೊದಲ ದಿನವೇ ಎಲಿಮಿನೇಶನ್ ಪ್ರಕ್ರಿಯೆ ಆರಂಭವಾಗಿತ್ತು. ಮೊದಲ ಬಾರಿ ಅನುಪಮಾ ಕ್ಯಾಪ್ಟನ್‌ ಆಗಿ ನಿವೇದಿತಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಬಳಿಕ ಉಳಿದ ಸ್ಪರ್ಧಿಗಳು ದಿವಾಕರ್‌, ಜೆಕೆ, ಜಗನ್ನಾಥ್‌, ಮೇಘಾ, ಜಯ ಸ್ರೀನಿವಾಸನ್‌ ಮತ್ತು ಸುಮಾ ಅವರನ್ನು ನಾಮಿನೇಟ್ ಮಾಡಿದ್ದರು.

ಈ ಏಳು ಮಂದಿಯಲ್ಲಿ ಸುಮಾ ಕೊನೆಗೆ ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ. ಹೊರ ಹೋಗುವಾಗ ಸುಮಾ ಅವರಿಗೆ ಬಿಗ್‌ ಬಾಸ್‌ ನೀಡಿದ್ದ ಸೂಪರ್ ಪವರನ್ನು ಸಿಹಿ ಕಹಿ ಚಂದ್ರ ಅವರಿಗೆ ನೀಡಿ ಹೊರನಡೆದಿದ್ದಾರೆ.

Social Media Auto Publish Powered By : XYZScripts.com