ಬಳ್ಳಾರಿ : ಖಾಸಗಿ ಬಸ್‌ನಲ್ಲಿ ಮಕ್ಕಳ ಸಾಗಾಟ ದಂಧೆ ಪತ್ತೆ ಹಚ್ಚಿದ ಸ್ಥಳೀಯರು

ಬಳ್ಳಾರಿ : ಖಾಸಗಿ ಬಸ್‌ನಲ್ಲಿ ಮಕ್ಕಳನ್ನು ಅಪಹರಿಸಿ ಸಾಗಾಟ ಮಾಡುತಿದ್ದ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಮಾನ್ವಿಯಿಂದ ಉಡುಪಿ ಕಡೆ ಎಸ್‌ಆರ್‌ಎಸ್‌ ಟ್ರಾವೆಲ್ಸ್‌ ಬಸ್‌ ತೆರಳುತ್ತಿತ್ತು. ಈ ವೇಳೆ ಬಸ್‌ನ ಸೀಟ್‌ ಅಡಿಯಲ್ಲಿ 20ಕ್ಕೂ ಹೆಚ್ಚು ಮಕ್ಕಳು ಕುಳಿತಿದ್ದರು. ಡಾಬಾ ಒಂದರ ಬಲಿ ಬಸ್‌ ಚಾಲಕ ಬಸ್‌ ನಿಲ್ಲಿಸಿದ್ದಾನೆ. ಈ ವೇಳೆ ಮಕ್ಕಳು ಅಳುತ್ತಿರುವ ಶಬ್ದ ಕೇಳಿದೆ. ಕೂಡಲೆ ಸ್ಥಳೀಯರು ಮಕ್ಕಳಿರುವುದನ್ನು ಖಾತರಿ ಪಡಿಸಿಕೊಂಡು ಮಕ್ಕಳನ್ನು ರಕ್ಷಿಸಿದ್ದಾರೆ.

ಬಳಿಕ ಸ್ಥಳೀಯರು ಮರಿಯಮ್ಮನ ಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರು ಬಸ್‌ ಚಾಲಕ ಹಾಗೂ ಸಿಬ್ಬಂದಿಯನ್ನು ವಿಚಾರಣೆ ಮಾಡಿದ್ದು, ಕಲ್ತೂರು ಶಾಲೆ ಮುಖ್ಯಸ್ಥರ ಮಾತುಕತೆ ನಡೆಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

 

Social Media Auto Publish Powered By : XYZScripts.com