ಬೈಕ್‌ನಲ್ಲಿ ಇನ್ಮುಂದೆ ಹಿಂಬದಿ ಸವಾರರು ಪ್ರಯಾಣ ಮಾಡುವಂತಿಲ್ಲ ….!?

ಬೆಂಗಳೂರು : ಬೆಂಗಳೂರಿನ ರಕ್ಕಸ ಗುಂಡಿಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ನಿಯಮ ರೂಪಿಸಲು ನಿರ್ಧರಿಸಿದ್ದು, ಇನ್ಮುಂದೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರು ಪ್ರಯಾಣ ಮಾಡುವಂತಿಲ್ಲ ಎಂಬ ನಿಯಮ ರೂಪಿಸಲಾಗಿದೆ. 100ಸಿಸಿ ವಾಹನಗಳಿಗೆ ಅನ್ವಯವಾಗುವಂತೆ ಈ ನಿಯಮ ರೂಪಿಸಲಾಗಿದೆ.

ದ್ವಿಚಕ್ರ ಪ್ರಯಾಣದ ವೇಳೆ ಹಿಂಬದಿ ಸವಾರರಿಗೆ ಯಾವುದೇ ರಕ್ಷಣೆ ಇರುವುದಿಲ್ಲ. ಅಲ್ಲದೆ ಹೆಚ್ಚಿನ ಮಕ್ಕಳು ಬೈಕಿಂದ ಬಿದ್ದು ಸಾವಿಗೀಡಾಗಿರುವ  ಪ್ರಕರಣಗಳು ಹೆಚ್ಚು ದಾಖಲಾಗಿರುವ ಹಿನ್ನೆಲೆಯಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೆ ಈ ಕುರಿತು ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದು, ಇನ್ನೊಂದು ವಾರದೊಳಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿಂದೆ.

ಆದರೆ ಹೊಸದಾಗಿ ಖರೀದಿಸುವ ವಾಹನಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದ್ದು, ಒಂದೇ ಸೀಟಿನ ಬೈಕ್ ತಯಾರಿಕೆಗೆ ಕಂಪನಿಗಳಿಗೆ ಸೂಚಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Social Media Auto Publish Powered By : XYZScripts.com