ಪಾಕ್ ಬೌಲರ್ ಕುರಿತು ವಿರಾಟ್ ಮೆಚ್ಚುಗೆ : ಕೊಹ್ಲಿಗೆ ಮೊಹಮ್ಮದ್ ಆಮಿರ್ ಹೇಳಿದ್ದೇನು..?

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ಚಾಟ್ ಷೋನಲ್ಲಿ ಭಾಗವಹಿಸಿದ್ದರು. ಅದೇ ಷೋನಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಆಮಿರ್ ಖಾನ್ ‘ ನೀವು ನಿಮ್ಮ ಕರಿಯರ್ ನಲ್ಲಿ ಎದುರಿಸಿದ ಅತ್ಯಂತ ಕಠಿಣ ಬೌಲರ್ ಯಾರು..? ‘ ಎಂದು ಕೇಳಿದ್ದರು. ಆಗ ವಿರಾಟ್ ಕೊಹ್ಲಿ, ಪಾಕಿಸ್ತಾನ ಬೌಲರ್ ‘ಮೊಹಮ್ಮದ್ ಆಮಿರ್’ ಎಂದಿದ್ದರು. ಈಗ ಪಾಕ್ ಬೌಲರ್ ಮೊಹಮ್ಮದ್ ಆಮಿರ್ ಕೊಹ್ಲಿ ಪ್ರಶಂಸೆಗೆ ಪ್ರತಿಕ್ರಿಯೆ ನೀಡಿದ್ದಾರೆ.

Image result for virat kohli mohammad amir

‘ ಮತ್ತೊಬ್ಬರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದು ಅವರ ವ್ಯಕ್ತಿತ್ವವನ್ನು ಹೇಳುತ್ತದೆ. ನನ್ನ ಬಗ್ಗೆ ಕೊಹ್ಲಿ ಹೇಳಿರುವ ಮಾತುಗಳಿಂದ ತುಂಬ ಸಂತಸವಾಗಿದೆ. ಕೋಲ್ಕತಾದಲ್ಲಿ ಅವರು ನನಗೆ ಬ್ಯಾಟ್ ನೀಡಿದ್ದು ಎಂದಿಗೂ ಮರೆಯಲಾಗದ ಕ್ಷಣ ‘

‘ ಕೊಹ್ಲಿ ಅತ್ಯುತ್ತಮ ಬ್ಯಾಟ್ಸಮನ್ ಎಂದು ಜಗತ್ತಿಗೇ ಗೊತ್ತು. ಅವರೆದುರು ಬೌಲಿಂಗ್ ಮಾಡುವಾಗ ತುಂಬಾ ಚೆನ್ನಾಗಿ ಆಡಬೇಕಾಗುತ್ತದೆ. ಸ್ವಲ್ಪವೇ ಅವಕಾಶ ನೀಡಿದರೂ ಪಂದ್ಯದ ಮೇಲೆ ಹಿಡಿತ ಸಾಧಿಸಿಬಿಡುತ್ತಾರೆ. ಅವರನ್ನು ಟಾರ್ಗೆಟ್ ಮಾಡಲು ನಾನು ನನ್ನ ಬೌಲಿಂಗ್ ನತ್ತ ಗಮನ ಹರಿಸಬೇಕಾಗುತ್ತದೆ. ಚೇಸಿಂಗ್ ನಲ್ಲಿ ಅವರು ಅತ್ಯುತ್ತಮ ಸ್ಟ್ರೈಕ್ ರೇಟ್ ಹಾಗೂ ಎವರೇಜ್ ಹೊಂದಿದ್ದಾರೆ. ಹಾಗಾಗಿ ಪ್ರಪಂಚದ ಎಲ್ಲ ಬೌಲರಗಳಿಗೂ ಕೊಹ್ಲಿ ಅತಿ ದೊಡ್ಡ ಸವಾಲಿನಂತೆ. ವಿರಾಟ್ ಎದುರು ಚೆನ್ನಾಗಿ ಬೌಲಿಂಗ್ ಮಾಡಿದಾಗ, ನೀವು ಉತ್ತಮ ಬೌಲರ್ ಆಗಲು ಸಾಧ್ಯವಾಗುತ್ತದೆ ‘ ಎಂದು ಆಮಿರ್ ಹೇಳಿದ್ದಾರೆ.