ಖ್ಯಾತ ಚಿತ್ರಕಾರ ಕೆ.ಎನ್.ರಾಮಚಂದ್ರನ್ ಮ್ಯೂಸಿಯಂ ಉದ್ಘಾಟನೆ : ತಪ್ಪದೇ ಬನ್ನಿ

ಬೆಂಗಳೂರು : ಖ್ಯಾತ ಕಲಾವಿದ ಕೆ.ಎನ್ ರಾಮಚಂದ್ರನ್‌ ಅವರ ಸವಿ ನೆನಪಿಗಾಗಿ ಕೆ.ಎನ್‌ ರಾಮಚಂದ್ರನ್‌ ಫೌಂಡೇಶನ್‌ ವತಿಯಿಂದ ಅವರ ಹೆಸರಿನಲ್ಲಿ ಮ್ಯೂಸಿಯಂ ತೆರೆಯಲು ನಿರ್ಧರಿಸಲಾಗಿದ್ದು, ಬಸವೇಶ್ವರ ನಗರದ ಶಾರದಾ ಕಾಲೋನಿ ಹತ್ತಿರದ ಜಯಂ ಆರ್ಟ್‌ ಗ್ಯಾಲರಿಯಲ್ಲಿ ಇದೇ ಅಕ್ಟೋಬರ್‌ 22ರಂದು ಮ್ಯೂಸಿಯಂ ಉದ್ಘಾಟನೆ ನೆರವೇರಲಿದೆ.

 

ರಾಮಚಂದ್ರನ್‌ ಅವರು ಕಲಾಕ್ಷೇತ್ರದ್ಲಲಿ ಮಾಡಿರುವ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಕಲಾಪ್ರೇಮಿಗಳಿಗೆ ಅವರ ಸಾಧನೆಯ ಸಂಪೂರ್ಣ ಪ್ರದರ್ಶನ ಮತ್ತು ಅವರ ಜೀವನದ ಕಲಾ ಪಯಣದ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮ್ಯೂಸಿಯಂ ತೆರೆಯಲಾಗುತ್ತಿದೆ.

ಈ ವಸ್ತು ಸಂಗ್ರಹಾಲಯದಲ್ಲಿ ರಾಮಚಂದ್ರನ್‌ ಅವರ ಕಲಾಕೃತಿಗಳು, ಅವರು ಬಳಸಿದ ಸಲಕರಣೆಗಳು, ಅವರ ಫೋಟೋಗಳ ಸಂಗ್ರಹ, ಅವರಿಗೆ ಸಂದ ಪ್ರಶಸ್ತಿಗಳ ಪರಿಚಯ ಮಾಡಿಸುವ ಪ್ರಯತ್ನ ನಡೆಯಲಿದೆ.

ರಾಮಚಂದ್ರನ್‌ ಅವರು ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಓವಿಯಾ ಮುನೇತ್ರ ಸಂಘವನ್ನು ಸ್ಥಾಪನೆ ಮಾಡಿದ್ದು, 60 ವರ್ಷಗಳಲ್ಲಿ 26 ಪ್ರದರ್ಶನಗಳನ್ನು ನಡೆಸಿಕೊಟ್ಟಿದ್ದರು. ಆರ್ಟಿಸ್ಟ್‌ ಕ್ಯಾಂಪ್‌, ಕಲಾ ಮೇಳ, ಆಲ್‌ ಇಂಡಿಯಾ ಎಕ್ಸಿಬಿಷನ್‌ ಸೇರಿದಂತೆ ಹಲವು ಪ್ರದರ್ಶನಗಳ ಭಾಗವಾಗಿ ಸೇವೆ ಸಲ್ಲಿಸಿದ್ದರು.

ಇವರ ಕಲಾಸೇವೆಯನ್ನು ಪರಿಗಣಿಸಿ ಬೆಂಗಳೂರು ವಿವಿ ಪ್ರಶಸ್ತಿ, ಓವಿಯಾ ತಿಲಕಂ-ಸಲೇಂ ಪ್ರಶಸ್ತಿ, ಹಾಸನ ಆರ್ಟ್‌ ಫೋರಂ ವತಿಯಿಂದ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

 

 

 

Social Media Auto Publish Powered By : XYZScripts.com