ಪುರೋಹಿತರನ್ನು ಮದುವೆಯಾದ್ರೆ ಸಿಗಲಿದೆ ನಾಲ್ಕು ಲಕ್ಷ…… ತೆಲಂಗಾಣ ಸರ್ಕಾರದಿಂದ ಭರ್ಜರಿ ಸ್ಕೀಂ…!!

ಹೈದರಾಬಾದ್‌ : ಇತ್ತೀಚಿನ ದಿನಗಳಲ್ಲಿ ಪುರೋಹಿತ ವೃತ್ತಿ ಮಾಡುವವರಿಗೆ ಯೋಗ್ಯವಾದ ಹೆಣ್ಣು ಸಿಗುವುದು ಕಷ್ಟ ಎಂಬಂತಹ ಸ್ಥಿತಿ ಬಂದೊದಗಿದೆ. ಎಲ್ಲಾ ಬ್ರಾಹ್ಮಣ ಹುಡುಗಿಯರು ಹೆಚ್ಚಿನ ವಿದ್ಯಾಭ್ಯಾಸ ಪಡೆಯುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಓದಿಗೆ ತಕ್ಕಂತಹ ವರನನ್ನೇ ಹುಡುಕುತ್ತಾರೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಇದಕ್ಕೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಿದೆ.

ಅರ್ಚಕರನ್ನು ಅಥವಾ ಪುರೋಹಿತರನ್ನು ವಿವಾಹವಾಗುವ ಯುವತಿಯರಿಗೆ ತೆಲಂಗಾಣ ಸರ್ಕಾರ 3 ಲಕ್ಷ ರೂ ಬಹುಮಾನ ಘೋಷಿಸಿದೆ. ಜೊತೆಗೆ ಮದುವೆಯ ವೆಚ್ಚವಾಗಿ ಒಂದು ಲಕ್ಷ ರೂ ನೀಡಲು ನಿರ್ಧರಿಸಿದೆ.  ಇತ್ತೀಚೆಗಷ್ಟೇ ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ನೇತೃತ್ವದ  ಸಮಿತಿ ಮಹಿಳೆಯರಿಗೆ ಸೀರೆ ನೀಡುವ ಯೋಜನೆ ಜಾರಿ ಮಾಡಿತ್ತು. ಇದಕ್ಕೆ ತೆಲಂಗಾಣದಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಕಲ್ಯಾಣ ಮಸ್ತು ಎಂಬ ಹೆಸರಿನ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ವಧುವಿಗೆ ನೀಡಲಾಗುವ ಮೂರು ಲಕ್ಷ ಮೊತ್ತದ ಹಣವನ್ನು ವಧು ಮತ್ತು ವರನ ಜಂಟಿ ಖಾತೆಯಲ್ಲಿ ಇರಿಸಲಾಗುತ್ತದೆ. ದಂಪತಿಗೆ ಮಕ್ಕಳಾದ ವೇಳೆ ಯಾವುದೇ ರೀತಿಯ ಆರ್ಥಿಕ ತೊಂದರೆ ಉಂಟಾದರೆ ಆಗ ಆ ಹಣವನ್ನು ಬಳಸಿಕೊಳ್ಳಬಹುದಾಗಿದೆ.
ಈ ಯೋಜನೆಯ ಲಾಭ ಪಡೆಯಲು ವಧು ಹಾಗೂ ವರನ  ಪೋಷಕರು  ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಮೂರು ವರ್ಷದ ಬಳಿಕ ಯೋಜನೆಯಿಂದ ಸಿಕ್ಕಂತಹ ಹಣವನ್ನು ಬಳಸಿಕೊಳ್ಳಬಹುದಾಗಿದೆ.

Social Media Auto Publish Powered By : XYZScripts.com