ಕತಾರ್‌ನಲ್ಲಿ ಯಶಸ್ವಿ ಪ್ರದರ್ಶನ ಕಂಡ ಕಾಫಿತೋಟ

ಕತಾರ್ : ಇದೇ ಅಕ್ಟೋಬರ್ 13 ರಂದು, ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ನಿರ್ದೇಶನದ ‘ ಕಾಫಿ ತೋಟ ’ ಚಲನಚಿತ್ರ, ದೋಹಾದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಇದೇ ಪ್ರಥಮ ಬಾರಿಗೆ ಚಿತ್ರದ ನಾಯಕ ರಘು ಮುಖರ್ಜಿ ಮತ್ತು ನಾಯಕಿಯರಾದ ರಾಧಿಕ ಚೇತನ್, ನವ ನಟಿ ಅಪೇಕ್ಷಾ ಪುರೋಹಿತ್ ಮತ್ತು ಚಿತ್ರದ ನಿರ್ಮಾಪಕರು ಆಗಮಿಸಿದ್ದರು.

ಸಂಪೂರ್ಣ ಚಿತ್ರವನ್ನು ಪ್ರೇಕ್ಷಕರೊಂದಿಗೆ ಕುಳಿತು ವೀಕ್ಷಿಸಿದ ಇವರು, ಕತಾರ್ ನಲ್ಲಿ ತಮ್ಮ ಚಿತ್ರ ಯಶಸ್ವಿ ಪ್ರದರ್ಶನಗೊಂಡ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದರು.  ಕೇವಲ ಒಂದು ವರ್ಷದ ಅವಧಿಯಲ್ಲಿ ಎಂಟು ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನಗೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದ ಇವರು, ಮುಂದೆಯೂ ಕನ್ನಡ ಚಿತ್ರಗಳಿಗೆ ಇದೇ ರೀತಿಯ ಸಹಕಾರ ತೋರುವಂತೆ ಮನವಿ ಮಾಡಿದರು ಹಾಗೂ ಇದಕ್ಕೆ ಕಾರಣಕರ್ತರಾದ ಚಿತ್ರ ಪ್ರದರ್ಶನದ ಮುಖ್ಯ ಆಯೋಜಕರಾದ ಸುಬ್ರಮ್ಮಣ್ಯ ಹೆಬ್ಬಾಗಿಲು ಅವರನ್ನು ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ಸುಬ್ರಮ್ಮಣ್ಯ ಹೆಬ್ಬಾಗಿಲು ಹಾಗು ಗೆಳೆಯರ ಬಳಗ ಚಿತ್ರತಂಡದವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಅರವಿಂದ ಪಾಟೀಲ್, ಐ.ಸಿ.ಬಿ.ಎಫ಼್ ನ ಕಾರ್ಯದರ್ಶಿ ಮಹೇಶ್ ಗೌಡ, ಐ.ಸಿ.ಸಿ ಯ( ಭಾರತೀಯ ಸಾಂಸ್ಕೃತಿಕ ಕೇಂದ್ರ) ಪದಾಧಿಕಾರಿ ನಿಯಾಜ಼್ ಅಹಮದ್ ಮತ್ತು ಕರ್ನಾಟಕ ಸಂಘ ಹಾಗೂ ಸೋದರ ಸಂಸ್ಥೆಗಳ ಮುಖ್ಯಸ್ಥರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Social Media Auto Publish Powered By : XYZScripts.com