ಬಿಗ್‌ಬಾಸ್‌-5 ಗ್ರ್ಯಾಂಡ್‌ ಓಪನಿಂಗ್‌… ಒಳಗೆ ಹೋದ ಸ್ಪರ್ಧಿಗಳು ಯಾರ್ಯಾರು ?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ – 5ಗೆ  ಗ್ರ್ಯಾಂಡ್‌ ಓಪನಿಂಗ್ ಸಿಕ್ಕಿದೆ. ಕಿಚ್ಚ- ಹುಚ್ಚ ಚಿತ್ರದ ‘ಮನಸೇ ಮನಸೇ ಥ್ಯಾಂಕ್ಯೂ’ ಸಾಂಗ್‌ ಹೇಳುತ್ತಾ  ನಿರೂಪಕ ಕಿಚ್ಚ ಸುದೀಪ್‌ ಎಂಟ್ರಿ ಕೊಟ್ಟಿದ್ದು, ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್‌ ಫಿಲ್ಮ್‌ ಸಿಟಿಯ ಬಿಗ್‌ಬಾಸ್‌ ಮನೆಗೆ ಈ ಬಾರಿ 11 ಸೆಲೆಬ್ರಿಟಿಗಳು ಸೇರಿದಂತೆ 17 ಮಂದಿ ಎಂಟ್ರಿಯಾಗಿದ್ದಾರೆ.

ಈ ಬಾರಿ ಬಿಗ್‌ಬಾಸ್‌ ಕಂಟೆಸ್ಟಂಟ್ಸ್‌ಗಳ ವಿವರ ಈ ಕೆಳಗಿನಂತಿದೆ:

ಜಯ ಶ್ರಿನಿವಾಸನ್‌ : ಇವರು ಸಂಖ್ಯಾಶಾಸ್ತ್ರಜ್ಞರಾಗಿ ಗುರುತಿಸಿಕೊಂಡವರು.

ಮೇಘಾ ಹೆಚ್‌.ವಿ. : ಇವರು ಕೊಡಗು ಜಿಲ್ಲೆಯಿಂದ ಬಂದವರು. ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡುತ್ತಿರುವ ಮೊದಲ ಸಾಮಾನ್ಯ ಸ್ಪರ್ಧಿ.

ದಯಾಳು ಪದ್ಮನಾಭಮ್ : ಕನ್ನಡದ ನಿರ್ದೇಶಕ, ನಿರ್ಮಾಪಕ ಹಾಗೂ ನಟನಾಗಿಯೂ ಕೆಲಸ ಮಾಡಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಗಾಳಿಪಟ ಚಿತ್ರದಲ್ಲಿ ಇವರು ಡ್ರಾಕುಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. 13 ಸಿನಿಮಾಗಳನ್ನು ಡೈರೆಕ್ಟ್‌ ಮಾಡಿದ್ದಾರೆ. 6 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ

ಸಿಹಿ-ಕಹಿ ಚಂದ್ರು: ನಿರ್ದೇಶಕ, ನಿರ್ಮಾಪಕ ಹಾಗೂ ಉತ್ತಮ ನಟ. ಇವರು ಹೆಚ್ಚಾಗಿ ಹಾಸ್ಯ ನಟನಾಗಿ ಖ್ಯಾತಿ ಪಡೆದಿದ್ದಾರೆ. ಬಿಗ್‌ಬಾಸ್‌ ಮನೆಗೆ ಇವರ ಎಂಟ್ರಿ ತುಂಬಾ ಕುತೂಹಲಕಾರಿಯಾಗಿತ್ತು.

ಶೃತಿ ಪ್ರಕಾಶ್‌: ಬೆಳಗಾವಿಯವರಾದ ಇವರು ಸದ್ಯ ನೆಲೆಸಿರುವುದು ಮುಂಬೈನಲ್ಲಿ. ಇವರು ಕಿರುತೆರೆಯ ನಟಿ ಹಾಗೂ ಸಿಂಗರ್ ಆಗಿ ಗುರುತಿಸಿಕೊಂಡಿದ್ದಾರೆ. ಹಿಂದಿಯ ಕೆಲ ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಅನುಪಮಾ ಗೌಡ: ಇವರು ಕೂಡ ಸೀರಿಯಲ್‌ ಆ್ಯಕ್ಟರ್‌. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಅನುಪಮಾ ‘ಅಕ್ಕಾ’ ಧಾರವಾಹಿಯಲ್ಲಿ ನಟಿಸಿದ್ದಾರೆ.

ರಿಯಾಜ್‌ ಭಾಷಾ: ಮೂಲತಃ ಬೆಂಗಳೂರಿನವರಾದ ಇವರು ಕಾರ್ಯಕ್ರಮ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಎರಡನೇ ಸಾಮಾನ್ಯ ಸ್ಪರ್ಧಿ.

ನಿವೇದಿತಾ ಗೌಡ: ಬಿಗ್‌ಬಾಸ್‌ನ 5 ಸೀಸನ್‌ಗಳಲ್ಲಿ ನಿವೇದಿತಾ ಗೌಡ ಅತೀ ಚಿಕ್ಕ ವಯಸ್ಸಿನ ಕಂಟೆಸ್ಟಂಟ್‌. 19 ವರ್ಷ ವಯಸ್ಸಿನ ನಿವೇದಿತಾ, ಮಾಡೆಲಿಂಗ್‌ ಮಾಡ್ತಾರೆ. ಹಾಗೂ ಕೆಲವು ಫ್ಯಾಶನ್‌ ಶೋಗಳಲ್ಲಿಯೂ ಪಾಲ್ಗೊಂಡಿದ್ದಾರೆ. ಮೈಸೂರಿನಿಂದ ಬಂದಿರುವ ಇವರು, ಹಲವು ಆಲ್ಬಮ್‌ ಸಾಂಗ್‌ಗಳನ್ನು ಮಾಡ್ತಿದ್ದಾರಂತೆ.

ಸಮೀರ್‌ ಆಚಾರ್ಯ ಮನ್ನೂರ್‌: ಹುಬ್ಬಳ್ಳಿಯಿಂದ ಬಂದಿರುವ ಇವರು ಬಿಗ್‌‌ಬಾಸ್‌ ಮನೆಗೆ ಎಂಟ್ರಿ ಕೊಡುತ್ತಿರುವ ನಾಲ್ಕನೇ ಸಾಮಾನ್ಯ ಕಂಟೆಸ್ಟಂಟ್‌.

ಕಾರ್ತಿಕ ಜಯರಾಮ್‌: ಕಿರುತೆರೆಯ ನಟ ಹಾಗೂ ಹಲವು ಚಲನಚಿತ್ರಗಳಲ್ಲಿಯೂ ಇವರು ನಟಿಸಿದ್ದಾರೆ. ಇವರು ಜೆಕೆ ಎಂಬ ಹೆಸರಿನಿಂದಲೇ ಫೇಮಸ್‌ ಆಗಿದ್ದಾರೆ.

ಆಶಿತಾ ಚಂದ್ರಪ್ಪ: ಇವರು ಕೂಡ ಕಿರುತೆರೆಯ ನಟಿ. ಕನ್ನಡದ ಹಲವು ಧಾರವಾಹಿಗಳಲ್ಲಿ ಇವರು ನಟಿಸಿದ್ದಾರೆ.

ದಿವಾಕರ್‌: ಇವರು ಹುಟ್ಟಿದ್ದು ನರಸೀಪುರ, ಬೆಳೆದಿದ್ದು ಮೈಸೂರಿನಲ್ಲಿ. ಸದ್ಯ ಇವರು ಸೇಲ್ಸ್ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ತೇಜಸ್ವಿನಿ: ಕನ್ನಡದ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಇವರು ನಟಿಸಿದ್ದಾರೆ.

ಚಂದನ್‌: ಇವರು ಕನ್ನಡ ಚಿತ್ರರಂಗದಲ್ಲಿ ಮ್ಯೂಸಿಕ್‌ ಡೈರೆಕ್ಟರ್‌, ಡಾನ್ಸರ್‌ ಹಾಗೂ ನಟನಾಗಿಯೂ ಗುರುತಿಸಿಕೊಂಡಿದ್ದಾರೆ.

ಸುಮಿತ್ರಾ ಗೌಡ: ಇವರು ಮೈಸೂರಿನವರು. ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡುತ್ತಿರುವ ಸಾಮಾನ್ಯ ಸ್ಪರ್ಧಿ.

ಜಗನ್ನಾಥ್ ಚಂದ್ರಶೇಖರ್ : ಜನಪ್ರಿಯ ಧಾರಾವಾಹಿ ‘ಗಾಂಧಾರಿ’ ನಾಯಕ ಜಗನ್ನಾಥ್ ಚಂದ್ರಶೇಖರ್ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ಹದಿನಾರನೆಯ ಸ್ಪರ್ಧಿ.

ಕೃಷಿ ತಾಪಂಡ : ‘ಅಕಿರ’ ಚಿತ್ರದ ನಾಯಕಿ ಕೊಡಗಿನ ಕುವರಿ ಕೃಷಿ ತಾಪಂಡ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ 17ನೇ ಸ್ಪರ್ಧಿ.

 

Social Media Auto Publish Powered By : XYZScripts.com