ನನ್ನನ್ನು ಕಂಡು ಹೊಟ್ಟೆ ಕಿಚ್ಚುಪಡುವವರು ಸುಟ್ಟು ಹೋಗುತ್ತಾರೆ : ಸಿದ್ದರಾಮಯ್ಯ

ಕೆ.ಅರ್.ನಗರ : ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸುತ್ತಿರುವ ನನ್ನನ್ನು ನೋಡಿದರೆ ಕೆಲವರಿಗೆ ಹೊಟ್ಟೆಕಿಚ್ವು, ಅಸೂಯೆ. ಹೀಗಾಗಿ ವೃಥಾ ಟೀಕೆ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಹೊಟ್ಟೆಕಿಚ್ವು ಪಡುವವರೇ ಸುಟ್ಟು ಹೋಗುತ್ತಾರೆ. ಅವರಿಗೇ ಕೆಟ್ಟದಾಗುತ್ತದೆ. ನನಗೆ ಒಳ್ಳೆಯದೇ ಆಗುತ್ತದೆ ಎಂದರು. ಜನಪರ ಕಾರ್ಯಕ್ರಮಗಳು ನನಗೆ ಮುಖ್ಯ. ಹೀಗಾಗಿ ಯಾರ ಟೀಕೆಗೂ ಹೆದರುವುದಿಲ್ಲ. ತಲೆ ಕೆಡಿಸಿಕೊಳ್ಳುವುದಿಲ್ಲ.

ನಾನು ಕಾಂಗ್ರೆಸ್ ಸೇರಲು‌ ಬೆಂಗಳೂರಿನ ಪೀರನ್ ಎಂಬುವರು ಕಾರಣ. ನನ್ನ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ನಡುವೆ ಸಭೆ ಏರ್ಪಾಡು ಮಾಡಿದವರು ಪೀರನ್. ಅಹಮದ್ ಪಟೇಲ್ ಅವರು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿಸಿದರು. ಇದು ಸತ್ಯ. ಪಕ್ಷ ಸೇರಲು ಸೋನಿಯಾಗಾಂಧಿ ಅವರು ನನಗೆ ಆಗ ಆಹ್ವಾನ ನೀಡಿದರು.

ಕೆಲವರು ಹೊಟ್ಟೆಕಿಚ್ವಿನಿಂದ ನಾನು ಸೇರಿಸಿದೆ ಕಾಂಗ್ರೆಸ್ ಗೆ ಎಂದು ಹೇಳುತ್ತಾರೆ. ಕಾಂಗ್ರೆಸ್ ನಲ್ಲಿ ಕಿಮ್ಮತ್ತು ಇಲ್ಲದವರು ನನ್ನನ್ನು ಸೇರಿಸಲು ಸಾಧ್ಯವೇ? ನನಗೆ ಅನ್ಯಯವಾಗಿದೆ ಎಂದು ನಾನು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಸೇರಿಸಿದೆ ಎನ್ನುವ ನಾಯಕರು ಹೇಳುತ್ತಾರೆ. ಆದರೆ, ಅನ್ಯಾಯವಾಗಿದ್ದು ಕೆ.ಆರ್.ನಗರದಲ್ಲಿ ಶಾಸಕರಾಗಿದ್ದ ದಿವಂಗತ ಮಂಚನಹಳ್ಳಿ ಮಹದೇವು ಅವರಿಗೆ.

2009ರ ಲೋಕಸಭೆ ಚುನಾವಣೆಯಲ್ಲಿ ಮಹದೇವು ಅವರಿಗೆ ಸಿಗಬೇಕಿದ್ದ ಮೈಸೂರು ಕ್ಷೇತ್ರದ ಟಿಕೆಟ್ ಈ ಹೊಟ್ಟೆಕಿಚ್ವಿನ ನಾಯಕ ಪಡೆದುಕೊಂಡರು. ನನ್ನ ರಾಜಕೀಯ ಜೀವನದಲ್ಲಿ ನನ್ನನ್ನು ನಂಬಿದವರಿಗೆ ದ್ರೋಹ ಮಾಡಿಲ್ಲ. ಮಾಡುವುದೂ ಇಲ್ಲ. ಆದರೆ ವಿರೋಧ ಮಾಡುತ್ತೇನೆ. ಮಾಡಿ ಧೈರ್ಯವಾಗಿ ಎದುರಿಸುತ್ತೇನೆ. ರಾಜಕೀಯ ಯಾರ ಸ್ವತ್ತೂ ಅಲ್ಲ. ಜನರ ಆಶೀರ್ವಾದ ಇರುವ ವರೆಗೆ ಅಧಿಕಾರದಲ್ಲಿ ಇರುತ್ತೇನೆ. ರಾಜ್ಯದ 30 ಜಿಲ್ಲೆಗಳಲ್ಲಿ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ.

ನನಗೆ ಜನರಲ್ಲಿ ನಂಬಿಕೆ. ಯಾರು ಎಷ್ಟೇ ಒಣಜಂಭ ಮಾಡಿದರೂ  ದುಷ್ಟ ಶಕ್ತಿಗಳು ನನ್ನ ವಿರುದ್ಧ ಎಷ್ಟೇ ಒಂದಾದರೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಲು ಆಗದು. ಇಂತಹ ಒಣಜಂಭದ ಮಾತುಗಳಿಂದ ನನ್ನ ಶಕ್ತಿ ಮತ್ತಷ್ಟು ಹೆಚ್ಚಾಗುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕೆಂದು ಮನವಿ ಮಾಡುತ್ತೇನೆ. ಜನರ ಆಶೀರ್ವಾದ ನಮ್ಮ ಪಕ್ಷದ ಅಭ್ಯರ್ಥಿ ಮೇಲಿರುವಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು. ಕಾರ್ಯಕರ್ತರೇ ಪಕ್ಷದ ಶಕ್ತಿ.

ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸರ್ಕಾರದ ಸಾಧನೆಗಳನ್ನು ವಿವರಿಸಿ ಜನರ ಆಶೀರ್ವಾದ ಪಡೆದುಕೊಳ್ಳಬೇಕು. ಕಾರ್ಯಕರ್ತರು ಬಿಜೆಪಿ, ಜೆಡಿಎಸ್ ನವರ ರೀತಿ ಸುಳ್ಳು ಹೇಳಿಕೊಂಡು ತಿರುಗುವ ಅಗತ್ಯವಿಲ್ಲ. ಜನರಿಗಾಗಿ ಸರ್ಕಾರ ಏನು ಮಾಡಿದೆ ಎಂಬುದನ್ನು ತಿಳಿಸಿದರೆ ಸಾಕು. ರಾಜ್ಯದ ಆರೂವರೆ ಕೋಟಿ ಜನರಿಗೆ ಸರ್ಕಾರ ಒಂದಿಲ್ಲೊಂದು ಕಾರ್ಯಕ್ರಮ ಕೊಟ್ಟಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 155 ಆಶ್ವಾಸನೆಗಳನ್ನು ಈಡೇರಿಸಲಾಗಿದೆ.

ನಮ್ಮದು ನುಡಿದಂತೆ ನಡೆದ ಸರ್ಕಾರ.  ಈ ವರ್ಷ ಆರು ಲಕ್ಷ ಯುವಕ, ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಯಾರೂ ಹಸಿವಿನಲ್ಲಿ ಮಲಗಬಾರದು ಎಂಬುದು ನಮ್ಮ ಉದ್ದೇಶ. ಇದಕ್ಕಾಗಿ ಅನ್ನಭಾಗ್ಯ ಯೋಜನೆ ಜಾರಿಯಲ್ಲಿದೆ. ಇಂದಿರಾ ಕ್ಯಾಂಟೀನ್ ಗಳನ್ನು ರಾಜ್ಯವ್ಯಾಪಿ ತೆರೆಯುತ್ತಿದ್ದೇವೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವರ್ಗದ ಜನರಿಗೆ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮ ಗಳು ಬೇರೆ ಯಾವ ರಾಜ್ಯದಲ್ಲಿ ಇಲ್ಲ.

ಇಂದಿರಾ ಕ್ಯಾಂಟೀನ್, ಮಾತೃಪೂರ್ಣ, ಮುಖ್ಯಮಂತ್ರಿಯವರ ಅನಿಲ ಭಾಗ್ಯ ಹೊಸದಾಗಿ ರೂಪಿಸಿರುವ ಯೋಜನೆಗಳಾಗಿವೆ. ರಾಜ್ಯದಲ್ಲಿ ಬಡವರು ಸೀಮೆಎಣ್ಣೆಯಲ್ಲಿ ಅಡುಗೆ ಮಾಡಬಾರದು ಎಂಬ ಕಾರಣಕ್ಕೆ ಗ್ಯಾಸ್, ಸಿಲಿಂಡರ್ ವಿತರಿಸುವ ಅನಿಲ ಭಾಗ್ಯ ಯೋಜನೆ ಡಿಸೆಂಬರ್ ಒಂದರಿಂದ ಜಾರಿಗೆ ತರಲಾಗುತ್ತದೆ.

1.86 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಅಂಗನವಾಡಿ ಮಕ್ಕಳಿಗೆ ಹಾಲು, ಮೊಟ್ಟೆ, ಹತ್ತು ಲಕ್ಷ ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ಕೊಡುತ್ತಿದ್ದೇವೆ. ಮಕ್ಕಳು, ಗರ್ಭಿಣಿಯರು ಆರೋಗ್ಯವಾಗಿರಬೇಕು ಎಂಬುದು ನಮ್ಮ ಉದ್ದೇಶ. ಮುಖ್ಯಮಂತ್ರಿಯಾಗಿ ಒಬ್ಬರ ಮನೆಗೆ ಹೋಗದವರು, ಕಾರ್ಯಕ್ರಮ ರೂಪಿಸದವರು ಈಗ ದಲಿತರ ಮನೆಗೆ ತಿಂಡಿ ತಿನ್ನಲು ಹೋಗುತ್ತಾರೆ. ಅಲ್ಲಿ ಹೊಟೇಲ್ ನಿಂದ ತಂದಿದ್ದನ್ನು ತಿಂದು ಬರುತ್ತಾರೆ.

ಪರಿಶಿಷ್ಟರ ಕಲ್ಯಾಣ  ಕಾರ್ಯಕ್ರಮ ಗಳ ಜಾರಿಗೆ ವಿಶೇಷ ಕಾಯಿದೆ ಜಾರಿಗೆ ತಂದವರು ನಾವು. ಕಾಮಗಾರಿ ಗುತ್ತಿಗೆಯಲ್ಲೂ ಮೀಸಲು ಸೌಲಭ್ಯವನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಟಿಪ್ಪು ಜಯಂತಿ, ಕೆಂಪೇಗೌಡ, ಭಗೀರಥ ಜಯಂತಿ, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ, ವಾಲ್ಮೀಕಿ ಪ್ರತಿಮೆ ಅನಾವರಣ, ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆ, ಈ ಎಲ್ಲವನ್ನೂ ಮಾಡಿದ್ದು ನಮ್ಮ ಸರ್ಕಾರ ಅಲ್ಲವೇ ? ಇಂತಹ ಸರ್ಕಾರಕ್ಕೆ ಜನ ಆಶೀರ್ವಾದ ಮಾಡಬೇಕಲ್ಲವೇ ?

ನಾನು ಒಂದು ಗುಂಪು, ಒಂದು ಜಾತಿಗೆ ಮುಖ್ಯಮಂತ್ರಿ ಅಲ್ಲ. ನಾಡಿನ ಆರೂವರೆ ಕೋಟಿ ಜನರ ಮುಖ್ಯಮಂತ್ರಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರವಿಶಂಕರ್ ಕೆ.ಆರ್.ನಗರ ವಿಧಾನಸಭೆ ಕ್ಷೇತ್ರಕ್ಕೆ ಅಭ್ಯರ್ಥಿ. ಅವರಿಗೆ ಆಶೀರ್ವಾದ ಮಾಡಿ ಎಂದು ಸಿಎಂ ಮನವಿ ಮಾಡಿದರು.

11 thoughts on “ನನ್ನನ್ನು ಕಂಡು ಹೊಟ್ಟೆ ಕಿಚ್ಚುಪಡುವವರು ಸುಟ್ಟು ಹೋಗುತ್ತಾರೆ : ಸಿದ್ದರಾಮಯ್ಯ

 • October 18, 2017 at 12:46 PM
  Permalink

  I will immediately grasp your rss as I can not to find your e-mail subscription hyperlink or e-newsletter service. Do you’ve any? Kindly let me recognize so that I may just subscribe. Thanks.|

 • October 18, 2017 at 2:31 PM
  Permalink

  Hi, i think that i saw you visited my website so i came to return the prefer?.I am attempting to find issues to improve my site!I suppose its ok to use some of your ideas!!|

 • October 18, 2017 at 4:18 PM
  Permalink

  Great site you have here.. It’s hard to find high-quality writing like yours these days. I truly appreciate people like you! Take care!!|

 • October 20, 2017 at 5:59 PM
  Permalink

  It’s very effortless to find out any topic on net as compared to books, as I found this piece of writing at this website.|

 • October 20, 2017 at 10:11 PM
  Permalink

  Hi there! I just wish to offer you a huge thumbs up for the great info
  you have got here on this post. I will be coming back to your website for more soon.

 • October 20, 2017 at 11:30 PM
  Permalink

  It’s wonderful that you are getting thoughts from this paragraph as well as from our dialogue made here.|

 • October 21, 2017 at 12:48 AM
  Permalink

  It’s a shame you don’t have a donate button! I’d without a doubt donate to this superb blog!
  I guess for now i’ll settle for bookmarking and adding your RSS feed to my Google account.

  I look forward to new updates and will share this blog with my
  Facebook group. Talk soon!

 • October 21, 2017 at 1:55 AM
  Permalink

  Good day! Do you know if they make any plugins to assist
  with Search Engine Optimization? I’m trying to get
  my blog to rank for some targeted keywords but I’m not seeing very good gains.
  If you know of any please share. Appreciate it!

 • October 21, 2017 at 3:59 AM
  Permalink

  This is really interesting, You are a very skilled blogger.

  I’ve joined your feed and look forward to seeking more of your magnificent post.
  Also, I have shared your site in my social networks!

 • October 24, 2017 at 8:44 PM
  Permalink

  Everyone loves what you guys tend to be up too. This type of clever work and exposure!
  Keep up the wonderful works guys I’ve incorporated you guys to my
  own blogroll.

Comments are closed.

Social Media Auto Publish Powered By : XYZScripts.com