ಬಳ್ಳಾರಿ : ATMನಲ್ಲಿ ಹಣ ಡ್ರಾ ಮಾಡಿದ ಗ್ರಾಹಕನಿಗೆ ಶಾಕ್ : ನೋಟಿನ ಬದಲು ಬಂದಿದ್ದು…?

ಬಳ್ಳಾರಿ : ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ಗ್ರಾಹಕನೊಬ್ಬ ಶಾಕ್ ಆದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.  ಹಣ ಪಡೆಯಲು ಹೋದ ಗ್ರಾಉಕನಿಗೆ  ನೋಟಿನ ಬದಲು ಕಾಗದ ಬಂದಿದೆ. ಬಳ್ಳಾರಿಯ ಟ್ಯಾಂಕ್ ಬಿಡ್ ರಸ್ತೆಯ ಎಸ್ ಬಿಐ ಬ್ಯಾಂಕ್ ನ ಎಟಿಎಂ ನಲ್ಲಿ ನೋಟಿನ ಬದಲು ಪೇಪರ್ ಬಂದಿದೆ. ರಮೇಶ್ ಎಂಬುವವರು ಎಟಿಎಂನಲ್ಲಿ 8 ಸಾವಿರ ರೂಪಾಯಿಗಳನ್ನು ಡ್ರಾ ಮಾಡಿದ್ದಾರೆ. ಈ ವೇಳೆ 7500 ರೂ ಅಸಲಿ ನೋಟು ಬಂದಿದೆ. ಬಳಿಕ ಇನ್ನು 500 ರೂ ಬದಲಾಗಿ ಪೇಪರ್ ಬಂದಿದ್ದು, ಇದರಿಂದ ಗ್ರಾಹಕ ರಮೇಶ್ ಶಾಕ್ ಆಗಿದ್ದಾರೆ.

ಇದು ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯ ಎಂದು ಹೇಳಲಾಗುತ್ತಿದ್ದು, ಬ್ಯಾಂಕ್ ವಿರುದ್ದ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಇಂದು ಬ್ಯಾಂಕ್ ರಜೆ ಹಿನ್ನೆಲೆ ನಾಳೆ ತೆರಳಿ ಹಣ ಪಡೆಯಲು ಪ್ರುತ್ನಿಸುವುದಾಗಿ ಅವರು ತಿಳಿಸಿದ್ದಾರೆ.

Social Media Auto Publish Powered By : XYZScripts.com