ಏಷ್ಯಾ ಕಪ್ ಹಾಕಿ : ಪಾಕ್ ವಿರುದ್ಧ ಭಾರತಕ್ಕೆ 3-1 ರಿಂದ ಭರ್ಜರಿ ಗೆಲುವು

2017 ಹಾಕಿ ಏಷ್ಯಾ ಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ 3-1 ರಿಂದ ಭರ್ಜರಿ ಗೆಲುವು ಸಾಧಿಸಿದೆ. ಢಾಕಾದ ಮೌಲಾನಾ ಭಾಷನಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಪೂಲ್ ‘ಎ’ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದೆ. ಪಾಕಿಸ್ತಾನ ವಿರುದ್ಧ ಕಳೆದ ಎರಡು ಬಾರಿ ಆಡಿದಾಗಲೂ ಭಾರತ ಜಯಗಳಿಸಿತ್ತು.

ಭಾರತದ ಪರವಾಗಿ 17ನೇ ನಿಮಿಷದಲ್ಲಿ ಚಿಂಗ್ಲೆನ್ಸಾನಾ ಕಾಂಗುಜಮ್, ಲಲಿತ್ ಕುಮಾರ್ ನೀಡಿದ ಪಾಸನ್ನು ಯಶಸ್ವಿಯಾಗಿ ಗೋಲನ್ನಾಗಿ ಪರಿವರ್ತಿಸಿದರು. ರಮನ್ ದೀಪ್ 43ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸಿದರು. ಟೂರ್ನಮೆಂಟಿನಲ್ಲಿ ಅತಿ ಹೆಚ್ಚು ಗೋಲ್ ಬಾರಿಸಿರುವ ಹರ್ಮನ್ ಪ್ರೀತ್ 45ನೇ ನಿಮಿಷದಲ್ಲಿ ಮೂರನೇ ಗೋಲ್ ದಾಖಲಿಸಿದರು. ಪಾಕ್ ಪರವಾಗಿ ಅಲಿ ಶಾನ್ 50ನೇ ನಿಮಿಷದಲ್ಲಿ ಗೋಲು ಬಾರಿಸಿದರು.

ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 5-1 ಗೋಲುಗಳ ಅಂತರದಲ್ಲಿ, ಹಾಗೂ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7-0 ಗೋಲ್ ಅಂತರದಿಂದ ಅಮೋಘ ಗೆಲುವು ಸಾಧಿಸಿತ್ತು. ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು ಸೂಪರ್ 4 ಹಂತವನ್ನು ಪ್ರವೇಶಿಸಿದೆ.

 

4 thoughts on “ಏಷ್ಯಾ ಕಪ್ ಹಾಕಿ : ಪಾಕ್ ವಿರುದ್ಧ ಭಾರತಕ್ಕೆ 3-1 ರಿಂದ ಭರ್ಜರಿ ಗೆಲುವು

 • October 18, 2017 at 1:36 PM
  Permalink

  Hello my family member! I want to say that this article is amazing, great written and come with approximately all significant infos. I’d like to peer extra posts like this .|

 • October 18, 2017 at 4:26 PM
  Permalink

  It’s amazing designed for me to have a website, which is valuable for my knowledge. thanks admin|

 • October 20, 2017 at 11:17 PM
  Permalink

  Thanks for your personal marvelous posting! I truly enjoyed reading it, you’re a great author.I will make sure to bookmark your blog and will come back later on. I want to encourage you to definitely continue your great writing, have a nice afternoon!|

Comments are closed.

Social Media Auto Publish Powered By : XYZScripts.com