ತಪ್ಪು ಮಾಡಿದ್ದು ಸಾಬೀತಾದ್ರೆ ಸಾರ್ವಜನಿಕ ಜೀವನದಿಂದ ನಿವೃತ್ತಿ – ಕೆ.ಸಿ ವೇಣುಗೋಪಾಲ್ …

ಬೆಂಗಳೂರು : ಲೈಂಗಿಕ ಶೋಷಣೆ ಆರೋಪ ಸಂಬಂಧ, ನಾನು ತಪ್ಪು ಮಾಡಿದ್ದೇನೆಂದು ಸಾಬೀತಾದ್ರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುತ್ತೇನೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ತಿಳಿಸಿದರು.

ತಮ್ಮ ವಿರುದ್ಧ ಲೈಂಗಿಕ ಶೋಷಣೆ ಆರೋಪದ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆ.ಸಿ ವೇಣುಗೋಪಾಲ್, ನಾನು 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ..ಒಂದೇ ಒಂದು ನಮ್ಮ ಮೇಲೆ ಕಪ್ಪು ಚುಕ್ಕಿ ಇಲ್ಲಾ. ವಿಪಕ್ಷಗಳು ಈ ರೀತಿಯ ಆರೋಪವನ್ನ ಮೊದಲಿನಿಂದಲು ಮಾಡಿಕೊಂಡು ಬಂದಿದ್ದಾರೆ. ನಾನು ಚುನಾವಣೆಗೆ ನಿಂತಾಗ ಹೆಚ್ಚು ಅಪಪ್ರಚಾರ ಮಾಡಿದ್ದರು ಎಂದು ಕಿಡಿ ಕಾರಿದರು.

36 ಕ್ರಿಮಿನಲ್ ಕೇಸು ಇರುವ ಮಹಿಳೆ ಆಕೆ. ಅವರು ನನ್ನ ಬಗ್ಗೆ ಆರೋಪ ಮಾಡಿದ್ದಾರೆ ಎನ್ನಲಾಗುತ್ತಿದೆ. ಅವರ ವಿರುದ್ಧ ಎರ್ನಾಕುಲಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ನಾನು ತಪ್ಪು ಮಾಡಿದ್ದೇನೆ ಎಂದು ಸಾಬೀತಾದರೆ ನಾನು ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಕೆ.ಸಿ ವೇಣುಗೋಪಾಲ್ ಸವಾಲು ಹಾಕಿದರು.

ಪ್ರಧಾನಿ ಮೋದಿ ವಿರುದ್ದ ಸಚಿವ ರೋಶನ್ ಬೇಗ್ ಅವಾಚ್ಯ ಶಬ್ದ ಬಳಕೆ ವಿಚಾರ ಸಂಬಂಧ ನಾನು ಎಐಸಿಸಿಯ ಪರವಾಗಿ ಮಾತನಾಡುತ್ತಿದ್ದೇನೆ. ಬಿಜೆಪಿಯ ನಾಯಕರು ಇದಕ್ಕಿಂತ ಹೆಚ್ಚಾಗಿ ಕಾಮೆಂಟ್ ಮಾಡಿದ್ದಾರೆ. ರೋಷನ್ ಬೇಗ್ ಗಿಂತ ಕೆಟ್ಟದಾಗಿ ಮಾತನಾಡಿದ್ದು ಕೇಳಿದ್ದೇನೆ. ರೋಷನ್ ಬೇಗ್ ಉದ್ದೇಶ ಪೂರಕವಾಗಿ ಮಾತನಾಡಿಲ್ಲ. ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೂ ಸಹಾ ಇಂತಹ ಪದ ಬಳಕೆ ಸರಿ ಅಲ್ಲ ಎಂದು ಖಂಡಿಸಿದರು.

ಇನ್ನು ರಾಹುಲ್ ಗಾಂಧಿ ಕೆಲವೇ ದಿನಗಳಲ್ಲಿ ಎಐಸಿಸಿ ಅಧ್ಯಕ್ಷರಾಗಲಿದ್ದಾರೆ. ಕೆಪಿಸಿಸಿ ಸಹಾ ಇದರ ಪರವಾಗಿದೆ ಎಂದು ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು.

One thought on “ತಪ್ಪು ಮಾಡಿದ್ದು ಸಾಬೀತಾದ್ರೆ ಸಾರ್ವಜನಿಕ ಜೀವನದಿಂದ ನಿವೃತ್ತಿ – ಕೆ.ಸಿ ವೇಣುಗೋಪಾಲ್ …

  • October 18, 2017 at 12:32 PM
    Permalink

    I am missing tto communicate my own little
    sibling, that hhe need to als head to this
    particular website on consistent basis in order to get current coming from more up-in order to-date suggestions.

Comments are closed.