ರಾಹುಲ್ ಶೀಘ್ರವೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲಿದ್ದಾರೆ : ಸೋನಿಯಾ ಗಾಂಧಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶೀಘ್ರವೇ ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ. ‘ರಾಹುಲ್ ಕಾಂಗ್ರೆಸ್ ಅಧ್ಯಕ್ಷನಾಗುವ ವಿಷಯ ತುಂಬಾ ದಿನಗಳಿಂದ ಚರ್ಚೆಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾಗುವುದನ್ನು ನೋಡಲಿದ್ದೀರಿ ‘ ಎಂದು ಸೋನಿಯಾ ಹೇಳಿದ್ದಾರೆ.

Image result for rahul gandhi sonia gandhi photos

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆತ್ಮಕಥೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೋನಿಯಾ ಗಾಂಧಿ, ಖಾಸಗಿ ಸುದ್ದಿವಾಹಿನಿಯೊಮದಿಗೆ ಮಾತನಾಡಿ ಈ ವಿಷಯವನ್ನು ತಿಳಿಸಿದ್ದಾರೆ. ಬರುವ ದೀಪಾವಳಿಯ ನಂತರ ರಾಹುಲ್, ಸೋನಿಯಾ ನಂತರದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಶೀಘ್ರವೇ ಅಧ್ಯಕ್ಷರನ್ನು ಆಯ್ಕೆ ಮಾಡುವ ಚುನಾವಣೆ ದಿನಾಂಕವನ್ನು ಪಕ್ಷ ನಿಗದಿ ಪಡಿಸುವ ಸಾಧ್ಯತೆಯಿದೆ. ಅಧಿಕೃತವಾಗಿ ಚುನಾಯಿತರಾದ ಬಳಿಕ ರಾಹುಲ್ ತಮ್ಮದೇ ಆದ ತಂಡವೊಂದನ್ನು ರಚಿಸಲಿದ್ದಾರೆ ಎಂಬ ಮಾಹಿತಿಗಳೂ ಲಭ್ಯವಾಗಿವೆ.

ಕೆಲದಿನಗಳ ಹಿಂದೆ ‘ಕೇವಲ ಇಬ್ಬರು ಮಾತ್ರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ಸಾಧ್ಯವಿದೆ, ತಾಯಿ ಅಥವಾ ಮಗ ‘ ಎಂದು ಹಿರಿಯ ಮುಖಂಡರಾದ ಮಣಿಶಂಕರ್ ಅಯ್ಯರ್ ಹೇಳಿಕೆ ನೀಡಿದ್ದರು.

Comments are closed.

Social Media Auto Publish Powered By : XYZScripts.com