ಕನ್ನಡ ಎಂದರೆ ಕುವೆಂಪು, ರಾಜಕುಮಾರ್ ನೆನಪಾಗುತ್ತದೆ : ಸಿದ್ದರಾಮಯ್ಯ

ಬೆಂಗಳೂರಿನಲ್ಲಿ ನಡೆದ ಕರವೇ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಭಾಷಣ ‘ ಕನ್ನಡಿಗರ ಸಮಾವೇಶ ಇದು. ಕನ್ನಡದ ಕಾರ್ಯಕ್ರಮದಲ್ಲಿ ಭಾಗವಹಿಸಲು ಖುಷಿ ಇದೆ. ಬೆಂಗಳೂರಿನಲ್ಲಿ ೪೭ ದಿನ ಮಳೆ ಬಂದಿದೆ. ಐತಿಹಾಸಿಕ ಮಳೆ ಇದು. ಮಳೆ ಬರಲಿ ಅಂತ ಪ್ರಾರ್ಥನೆ ಮಾಡುತ್ತಿದ್ದಿವಿ. ಕಳೆದ ೫ ವರ್ಷದಲ್ಲಿ ೨ ವರ್ಷ ಭೀಕರ ಬರಗಾಲ ಇತ್ತು. ನನಗೆ ನಂಬಿಕೆ ಜಾಸ್ತಿ ಇಲ್ಲ, ಆದರೆ ಪ್ರಾಥನೆ ಫಲವಾಗಿ ಮಳೆ ಬಂದಿದೆ.  ನಿನ್ನೆ ಅರ್ಚಕರು, ಮಹಿಳೆ ಸೇರಿದಂತೆ ಮತ್ತೊಬ್ಬ ಹುಡುಗಿ ಕೊಚ್ಚಿ ಹೋಗಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ‘ ಎಂದರು.

Image result for siddaramaiah kannada flag

‘ ನಾನು ಕನ್ನಡಿಗ, 65 ವರ್ಷದಿಂದ ಕನ್ನಡದ ಧ್ವಜಕ್ಕಾಗಿ ಮಾತುಕತೆ ನಡೆಯುತ್ತಿದೆ. ಇದಕ್ಕಾಗಿ ನಮ್ಮ ಸರ್ಕಾರ ಧ್ವಜ ಬೇಕು ಅಂತ ಸಮಿತಿ ರಚಿಸಿದೆ. ಕನ್ನಡಿಗನಾಗಿ, ಕರ್ನಾಟಕಕ್ಕಾಗಿ ಬಾವುಟ ನಿರೀಕ್ಷೆ ಇದೆ.  ಮೆಟ್ರೋದಲ್ಲಿ ಹಿಂದಿ ಹೇರಿಕೆ ನಿಲ್ಲಿಸಲಾಯ್ತು. ಕಾವೇರಿ,ಮಹದಾಯಿ ವಿಚಾರದಲ್ಲಿ ಅನ್ಯಾಯವಾಗಿದ್ರು  ನಮ್ಮ ಸರ್ಕಾರ ಹೋರಾಟ ಮಾತ್ರ ಬಿಟ್ಡಿಲ್ಲ. ಕುವೆಂಪು ಮಾತು ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ಆಗುತ್ತದೆ. ಎಲ್ಲದರೂ ಇರು, ಹೇಗಾದರೂ ಇರು ಕನ್ನಡಿಗನಾಗಿರು ‘ ಎಂದು ಹೇಳಿದ್ದಾರೆ.

‘ ಕನ್ನಡ ಎಂದರೆ ಕುವೆಂಪು, ಕನ್ನಡ ಎಂದರೆ ರಾಜ್ ಕುಮಾರ್ ನೆನಪಾಗುತ್ತದೆ ಎಂದ ಸಿಎಂ ಕನ್ನಡದ ನಾಡಗೀತೆ ಹಾಡಿನ ಸಾಲುಗಳನ್ನು ಹೇಳಿ ಕನ್ನಡದ ನೀತಿ ಪಾಲಿಸುವಂತೆ ಸಿಎಂ ಸಲಹೆ ನೀಡಿದರು. ಕನ್ನಡಕ್ಕಾಗಿ ಹೋರಾಟ ಮಾಡಿದವರ ವಿರುದ್ಧ ಇರೊ ಕೇಸ್ ವಾಪಸ್ ಪಡೆಯಲಾಗುತ್ತದೆ ‘ ಎಂದು ಸಿಎಂ ಹೇಳಿದ್ದಾರೆ.