ಮತ್ತೊಂದು ದಾಖಲೆ ಬಿಡುಗಡೆ ಮಾಡುತ್ತೆನೆಂದ BSY – ಈ ಬಾರಿ BBMP ಹಗರಣದ ಕಥೆ…

ಬೆಂಗಳೂರು: ಹಲವಾರು ಬಾರಿ ಕಾಂಗ್ರೆಸ್ ನಾಯಕರ ಬ್ರಷ್ಟಾಚಾರದ ಪ್ರಕರಣಗಳನ್ನು ದಾಖಲೆ ಸಮೆತ ಬಿಡುಗಡೆ ಮಡುತ್ತೆನೆಂದು ಹೇಳುತ್ತಲೆ ಬರುತ್ತಿರುವ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಕೆಂಗಣ್ಣಿಗೆ  ಬಿಬಿಎಂಪಿ ಬಿದ್ದಿದೆ. BBMP ಹಣವನ್ನ ಸಿಎಂ, ಜಾರ್ಜ್ ಲೂಟಿ ಹೊಡೆದಿದ್ದಾರೆ. ಈ ಕುರಿತು ಶೀಘ್ರವೇ ದಾಖಲೆಗಳನ್ನ ಬಿಡುಗಡೆ ಮಾಡುತ್ತೇವೆ ಎಂದು ಮತ್ತೊಮ್ಮೆ ಅಬ್ಬರಿಸಿದ್ದಾರೆ.


ನಿನ್ನೆ ಸುರಿದ ಭಾರಿ ಮಳೆಗೆ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ನಿದ್ದೆಯಲ್ಲಿದ್ದ ಸಿದ್ದರಾಮಯ್ಯನವರ ಕಣ್ಣು ತೆರೆಸಿದ್ದೇವೆ. ಬಿಬಿಎಂಪಿ ಸತ್ತು ಹೋಗಿದೆ. ಪಾಲಿಕೆ ಹಣವನ್ನ ಸಿಎಂ ಸಿದ್ದರಾಮಯ್ಯ ಜಾರ್ಜ್ ಲೂಟಿ ಹೊಡೆದಿದ್ದು, ಈ ಕುರಿತು ಮೂರು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಮಳೆಯಿಂದ ಸಂಕಷ್ಠಕ್ಕೀಡಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಕೆಲವರಿಗೆ ಪರಿಹಾರ ನೀಡಿದ್ದೇವೆ. ಇದನ್ನ ಸಿಎಂ ಸಿದ್ದರಾಮಯ್ಯ ರಾಜಕೀಯ ಅಂತಾರೇ. ಇದರಲ್ಲಿ ರಾಜಕೀಯ ಇಲ್ಲ ಎಂದ ಅವರು ಆಡಳಿತ ಪಕ್ಷದ ಬ್ರಷ್ಟಾಚಾರವನ್ನು ಬಯಲು ಮಾಡುತ್ತೆವೆ ಎಂದು ಹೇಳಿದರು…

Social Media Auto Publish Powered By : XYZScripts.com