ನ್ಯೂಜಿಲೆಂಡ್ ಸರಣಿ : ಅಶ್ವಿನ್, ಜಡೇಜಾಗೆ ವಿಶ್ರಾಂತಿ : ಶಾರ್ದೂಲ್, ಕಾರ್ತಿಕ್ ಗೆ ಸ್ಥಾನ

ಅಕ್ಟೋಬರ್ 22 ರಿಂದ ಶುರುವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಹೆಸರಿಸಲಾಗಿದೆ. ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾಗೆ ಮತ್ತೆ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ಆಯ್ಕೆಯಾಗಿದ್ದ ಕೆ ಎಲ್ ರಾಹುಲ್ ಹಾಗೂ ಉಮೇಶ್ ಯಾದವ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹಾಗೂ ವೇಗಿ ಶಾರ್ದೂಲ್ ಠಾಕೂರ್ ಅವರಿಗೆ ಸ್ಥಾನ ನೀಡಲಾಗಿದೆ.

Image result for dinesh karthik 

ಅಶ್ವಿನ್ ಹಾಗೂ ಜಡೇಜಾ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಉತ್ತಮ ನಿರ್ವಹಣೆ ತೋರಿದ್ದ, ಎಡಗೈ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಸಿಂಗ್ ಚಹಲ್ ಅವರನ್ನು ತಂಡದಲ್ಲಿ ಮುಂದುವರೆಸಲಾಗಿದೆ. ಕುಲದೀಪ್ 7 ಹಾಗೂ ಚಹಲ್ 6 ವಿಕೆಟ್ ಪಡೆದಿದ್ದರು. ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳ ನಡುವೆ 3 ಏಕದಿನ ಮತ್ತು 3 ಟಿ-20 ಪಂದ್ಯಗಳು ನಡೆಯಲಿವೆ.

ತಂಡ ಇಂತಿದೆ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮನಿಶ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಎಮ್ಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾಹ್, ಭುವನೇಶ್ವರ ಕುಮಾರ್, ಶಾರ್ದುಲ್ ಠಾಕೂರ್

4 thoughts on “ನ್ಯೂಜಿಲೆಂಡ್ ಸರಣಿ : ಅಶ್ವಿನ್, ಜಡೇಜಾಗೆ ವಿಶ್ರಾಂತಿ : ಶಾರ್ದೂಲ್, ಕಾರ್ತಿಕ್ ಗೆ ಸ್ಥಾನ

 • October 18, 2017 at 1:08 PM
  Permalink

  Excellent blog here! Also your site loads up very fast! What web host are you using? Can I get your affiliate link to your host? I wish my web site loaded up as quickly as yours lol|

 • October 18, 2017 at 2:51 PM
  Permalink

  My family members all the time say that I am wasting my time here at net, except I know I am getting experience all the time by reading thes fastidious content.|

 • October 21, 2017 at 12:04 AM
  Permalink

  hello!,I like your writing very so much! share we keep up a correspondence more about your article on AOL? I require an expert in this space to resolve my problem. May be that’s you! Having a look forward to peer you. |

Comments are closed.

Social Media Auto Publish Powered By : XYZScripts.com