ದೇಶದೊಳಗೆ ಸಿದ್ಧವಾಗುತ್ತಿವೆಯಂತೆ ಸ್ತ್ರೀಯರು ಬಳಸುವ ಕಾಂಡೋಮ್ ಗಳು …..!

         ಸೇಫ್ ಸೆಕ್ಸ್ ವಿಷಯದಲ್ಲಿ ಸ್ತ್ರೀಯರಿಗು ಬಂತು ಜವಾಬ್ದಾರಿಯಲ್ಲಿ ಸಮಪಾಲು

ಇನ್ಮೇಲೆ ಅಗತ್ಯಬಿದ್ದಾಗ ಕಾಂಡೊಮ್ ಬಳಸಬೇಕಾದದ್ದು ಕೇವಲ ಗಂಡಸರಿಗಷ್ಟೇ ಅನ್ವಯಿಸುವಂತದ್ದು ಅನ್ನುವಂತಿಲ್ಲ. ಯಾಕಂದ್ರೆ ಹೆಂಗಸರು ಬಳಸಬಹುದಾದ ಕಾಂಡೊಮ್ ಗಳು ಸಧ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿವೆಯಂತೆ.

ಮೊಟ್ಟ ಮೊದಲ ಬಾರಿಗೆ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ನೈಸರ್ಗಿಕ ಲ್ಯಾಟೆಕ್ಸ್ ಆಧಾರಿತ ಸ್ತ್ರೀಯರ ಕಾಂಡೊಮ್ ಗಳನ್ನ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಜೆ ಪಿ ನಡ್ಡಾ ಇತ್ತೀಚಿಗೆ ಬಿಡುಗಡೆ ಮಾಡಿದ್ದಾರೆ. ಈ ಕಾಂಡೋಮ್ ಗಳನ್ನ ಪರಿಚಯ ಮಾಡಿದ್ದರಿಂದಾಗಿ ಗರ್ಭನಿರೋಧಕ ಅವಕಾಶಗಳು ಹೆಚ್ಚಾಗಲಿವೆ. ಜೊತೆಗೆ ಕಡಿಮೆ ದರದಲ್ಲಿ ಅನಗತ್ಯ ಗರ್ಭ ಧರಿಸುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

 

 

ವೆಲ್ವೆಟ್ ಹೆಸರಿನ ಈ ಕಾಮಡೋಮ್ ಗಳನ್ನ ಹೆಚ್ ಎಲ್ ಎಲ್ ಲೈಫ್ ಕೇರ್ ಲಿಮಿಟೆಡ್ ಕಂಪನಿಯು ತಯಾರಿಸಲಿದೆಯಂತೆ. ಸುರಕ್ಷತೆಯ ಸೆಕ್ಸ್ ದೃಷ್ಟಿಯಿಂದ ಈ ಕಾಮಡೊಮ್ ಗಳು ಹೆಚ್ಚು ಪ್ರಯೋಜನಕಾರಿಯಾಗಿದ್ದು, ಮಹಿಳಾ ಸಬಲೀಕರಣದತ್ತ ಇದು ಒಂದು ಮುನ್ನಡೆ ಎನ್ನಬಹುದು. ಹಾಗೆಯೇ ಇದು ಗರ್ಭನಿರೋಧಕದ ಜೊತೆಗ ಹೆಚ್ ಐವಿ ಏಡ್ಸ್ ನಂಥಹ ಮಾರಕ ಕಾಯಿಲೆಗಳಿಂದಲೂ ರಕ್ಷಣೆ ನೀಡಲಿದೆ. ಹಾಗೇ ಮಗುವನ್ನ ಪಡೆಯುವ ನಿರ್ಧಾರದಲ್ಲಿ ಹೆಣ್ಣು ಕೂಡಾ ಈ ಮೂಲಕ ತನ್ನ ಹಕ್ಕು ಚಲಾಯಿಸಬಹುದಾಗಿದೆ.

One thought on “ದೇಶದೊಳಗೆ ಸಿದ್ಧವಾಗುತ್ತಿವೆಯಂತೆ ಸ್ತ್ರೀಯರು ಬಳಸುವ ಕಾಂಡೋಮ್ ಗಳು …..!

  • October 20, 2017 at 10:01 PM
    Permalink

    Thanks for the auspicious writeup. It actually used to be a leisure account it. Glance complicated to more delivered agreeable from you! However, how can we be in contact?

Comments are closed.