ಸಮ್ಮಿಶ್ರ ಸರಕಾರ ಮಾಡಲ್ಲ : ಬಹುಮತ ಸಿಗದಿದ್ದರೇ ವಿಪಕ್ಷ ಸ್ಥಾನದಲ್ಲಿ : ಹೆಚ್.ಡಿ ದೇವೇಗೌಡ…

ಹಾಸನ : ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹುಮತ ಸಿಗದಿದ್ದರೆ ವಿಪಕ್ಷದಲ್ಲಿ ಕೂರುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪುನರುಚ್ಛರಿಸಿದರು.ಹಾಸನದಲ್ಲಿ  ಮಾತನಾಢಿದ ಮಾಜಿ‌ ಪ್ರಧಾನಿ ಹೆಚ್.ಡಿ. ದೇವೇಗೌಡರು, ಯಾರೊಂದಿಗೂ ಸೇರಿ ಸಮ್ಮಿಶ್ರ ಸರಕಾರ ಮಾಡಲ್ಲ, ಏಕಂದ್ರೆ ನಾವು ಎಲ್ಲರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ, ಶ್ರೀನಿವಾಸ್ ಪ್ರಸಾದ್ ರನ್ನು ಜೆಡಿಎಸ್ ಗೆ ಕರೆತಂದಿದ್ದು ನಾನು, ಆಗ ಸಿದ್ದು ಪ್ರಶ್ನೆ ಮಾಡಿದ್ದರು, ಈಗ ಸಿದ್ದರಾಮಯ್ಯ ವಿರುದ್ಧ ನನ್ನ ಹೋರಾಟ ಎಂದು ಪ್ರಸಾದ್ ಹೇಳಿದ್ದಾರೆ, ನಂಜನಗೂಡು ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ಎಂದಿದ್ದೆ, ಈಗ ಅವರು ಚುನಾವಣೆಗೆ ನಿಲ್ಲಲ್ಲ ಎಂದಿದ್ದಾರೆ ಎಂದು ತಿಳಿಸಿದರು.

ಇನ್ನು ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ನಮ್ಮ ಪಾರ್ಟಿ ಗೆ ಬರೋದು ನನಗೆ ಗೊತ್ತಿಲ್ಲ, ಈ ಬಗ್ಗೆ ನಾನು ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ ಹೆಚ್.ಡಿ ದೇವೇಗೌಡರು, ನಿಖಿಲ್ ಒಬ್ಬ ನಟ, ಸನ್ ಆಫ್ ಕುಮಾರಸ್ವಾಮಿ, ಅವನ‌ ಚರಿಷ್ಮ ಪಕ್ಷಕ್ಕೆ ಅನುಕೂಲ ವಾಗೋದಾದ್ರೆ ಏಕೆ ಬಳಕೆ ಮಾಡಿಕೊಳ್ಳಬಾರದು? ಪಕ್ಷಕ್ಕೆ ಶಕ್ತಿ ತುಂಬೋದಾದ್ರೆ ಏಕೆ ಬೇಡ ಅನ್ನಲಿ, ತಂದೆಗಾಗಿ‌ ಓಡಾಡಿದ್ರೆ ಏಕೆ ಬೇಡ ಅನ್ನಲಿ ಎಂದು ಹೇಳಿದರು. ಪ್ರಜ್ವಲ್ ಆಗಲೇ ಪಾಟಿಟಿಕ್ಸ್ ನಲ್ಲಿದ್ದಾನೆ,

ಹಿಮಾಚಲ ಪ್ರದೇಶ,ಗುಜರಾತ್ ಚುನಾವಣೆ ಒಟ್ಟಿಗೆ ನಡೆಯುತ್ತದೆ ಎಂದು ನಾವು ಅಂದುಕೊಂಡಿದ್ದೆವು, ಆದರೆ ಈ ವಿಷಯದಲ್ಲಿ ಪ್ರಧಾನಿ ಪ್ರಯೋಗ ಮಾಡಲು ಹೊರಟಿದ್ದಾರೆ, ನಾಮಪತ್ರ- ಮತದಾನಕ್ಕೆ 9 ದಿನ ಮಾತ್ರ ಅಂತರ, ಇದು ಪ್ರಾದೇಶಿಕ ಪಕ್ಷ, ನಮ್ಮಂಥ ನಾಯಕರಿಗೆ ಎಚ್ಚರಿಕೆ ಗಂಟೆ, ನಾನು ಆಯೋಗದ ಬಗ್ಗೆ ಮಾತನಾಡಲ್ಲ, ರಾಷ್ಟ್ರೀಯ ಪಕ್ಷದಿಂದ ಈ ರೀತಿಯ ಅನಾರೋಗ್ಯರ ಸ್ಪರ್ಧೆ ಒಳ್ಳೇದಲ್ಲ, ಉಭಯ ಪಕ್ಷಗಳಿಗೆ ಹಣದ ಬಲವಿದೆ, ಅವಶ್ಯ ಇದ್ದಾಗ ಪ್ರಾದೇಶಿಕ ಪಕ್ಷ ಬಳಕೆ ಮಾಡಿಕೊಳ್ಳುತ್ತಾರೆ, ಬೇಡವಾದಾಗ ನಿರ್ಲಕ್ಷ್ಯ ಮಾಡುತ್ತಾರೆ, ಪ್ರಾದೇಶಿಕ ಪಕ್ಷಗಳ ದೌರ್ಬಲ್ಯ ರಾಷ್ಟ್ರೀಯ ಪಕ್ಷಗಳಿಗೆ ಲಾಭ.

Comments are closed.

Social Media Auto Publish Powered By : XYZScripts.com